Sunday, December 29, 2024

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ರವರಿಂದ ನೇತ್ರದಾನ

ಚಿಕ್ಕಬಳ್ಳಾಪುರ: ಈಗಾಗಲೇ ಮರೆಯಾಲಾಗದ ಮಾಣಿಕ್ಯ ಅಪ್ಪು ರವರಿಂದ ಸ್ಪೂರ್ತಿಗೊಂಡು ಸಾಕಷ್ಟು ಜನರು ವಿವಿಧ ರೀತಿಯಲ್ಲಿ ಸಮಾಜಕ್ಕೆ ಸೇವೆಸಲ್ಲಿಸುತ್ತಿದ್ದಾರೆ.

ಮುಖ್ಯವಾಗಿ, ಇಂದಿನ ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ನೇತ್ರದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ರಿಂದ ನೇತ್ರದಾನ ಮಾಡಿದ್ದಾರೆ. ಮರಣದ ನಂತರ ನೇತ್ರದಾನಕ್ಕೆ ಶಾಸಕ ಕೃಷ್ಣಾರೆಡ್ಡಿ ಸಹಿ ಹಾಕಿದ್ದಾರೆ. ಈ ಕುರಿತು ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ.

ಕಾಣದಂತೆ ಸೇವೆ ಮಾಡಿ ಮರೆಯಾದ ಪುನೀತ್ ರಾಜ್ ಕುಮಾರ್ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಸೇವಾ ಮನೋಭಾವನೆಯನ್ನ ಮೈಗೂಡಿಸಿಕೊಳ್ಳುವಂತೆ ಎಲ್ಲರಿಗು ಮನವಿ ಮಾಡಿದ್ದಾರೆ. ಇನ್ನು ಸಾರ್ವಜನಿಕರಿಗೆ ಅಂಗಾಂಗ ದಾನ ಮಾಡುವಂತೆ ಶಾಸಕರು ಕಿವಿ ಮಾತು ಹೇಳಿದ್ದಾರೆ.

RELATED ARTICLES

Related Articles

TRENDING ARTICLES