ಮಂಡ್ಯ:ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನಕ್ಕೆ ಮಂಡ್ಯ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ, ನಾಡ ಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಹಿನ್ನಲೆ ರಾಜ್ಯದ್ಯಂತ ಮೃತ್ತಿಕೆ ಸಂಗ್ರಕ್ಕೆ ಚಾಲನೆ ನೀಡಲಾಗುತ್ತಿದೆ.
ಇನ್ನು ಮಂಡ್ಯದಲ್ಲಿ ಮಣ್ಣು ಸಂಗ್ರಹ ಅಭಿಯಾನದ ಕಾರ್ಯಕ್ರಮ ಉದ್ಘಾಟನೆ ಆಗಿದ್ದು, ಮಂಡ್ಯದ ಶಕ್ತಿ ದೇವತೆ ಕಾಳಿಕಾಂಭ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಗಿದೆ. ಜಿಲ್ಲಾಡಳಿತದ ವತಿಯಿಂದ ಮಣ್ಣು ಸಂಗ್ರಹದ ಅಭಿಯಾನ ಶುರುವಾಗಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ.
ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನದ ಎರಡೂ ವಾಹನಕ್ಕೆ ಚಾಲನೆ ನೀಡಲಾಗಿದ್ದು, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ವಾಹನಗಳು ಸಂಚರಿಸಿ ಮಣ್ಣು ಸಂಗ್ರಹ.237 ಗ್ರಾ.ಪಂ.ಯಿಂದ ಪವಿತ್ರ ಮಣ್ಣು ಸಂಗ್ರಹ ಕಾರ್ಯವಾಗುತ್ತಿದೆ. ವಾಹನಗಳಿಗೆ ಪೂಜೆ ಸಲ್ಲಿಸಿ ಮಣ್ಣು ಸಂಗ್ರಹ ಅಭಿಯಾನಕ್ಕೆ ಚಾಲನೆ.
ಕಾರ್ಯಕ್ರಮದಲ್ಲಿ ಕೊಮ್ಮೆರಹಳ್ಳಿ ಮಠದ ಪುರುಷೋತ್ತಮನಂದ ಸ್ವಾಮಿ,ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ,ಸಚಿವ ಕೆಸಿ.ನಾರಾಯಣ್ ಗೌಡ,ಶಾಸಕ ಎಂ.ಶ್ರೀನಿವಾಸ್, ಡಿಸಿ ಹೆಚ್.ಎನ್.ಗೋಪಾಲಕೃಷ್ಣ, ಎಡಿಸಿ ನಾಗರಾಜು ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.