Wednesday, January 22, 2025

ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ 2 ಲಕ್ಷ ಜನ ಸೇರುವ ಸಾಧ್ಯತೆ

ಬೆಂಗಳೂರು ಗ್ರಾಮಾಂತರ: ನವೆಂಬರ್ 11 ಕ್ಕೆ ಕೆಂಪೇಗೌಡ ಪುತ್ಥಳಿ ಅನಾವರಣ ಹಿನ್ನೆಲೆ, ಪ್ರದಾನಿ ಮೋದಿ ಕಾರ್ಯಕ್ರಮದ ಸ್ಥಳಕ್ಕೆ ಸಚಿವ ಸೋಮಣ್ಣ ಬೇಟಿನೀಡಿ ಪರಿಶೀಲಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಭುವನಹಳ್ಳಿ ಬಳಿ ನಡೆಯಲಿರೂ ಕಾರ್ಯಕ್ರಮದಲ್ಲಿ, ಮೊದಲಿಗೆ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮ ನೆರವೇರಲಿದೆ. 2 ಲಕ್ಷ ಜನರನ್ನ ಸೇರಿಸಿ ಕಾರ್ಯಕ್ರಮ ನಡೆಸಲು ‌ಸಿದ್ದತೆಯನ್ನು ಈಗಾಗಲೇ ನಡೆಸಲಾಗಿದೆ.

ಅಧಿಕಾರಿಗಳ ಜೊತೆ ಆಗಮಿಸಿ ಪರಿಶೀಲನೆ ನಡೆಸಿದ ಸಚಿವ ಸೋಮಣ್ಣ. ಕೆಂಪೇಗೌಡ ಪ್ರತಿಮೆ ಮುಂದೆ ಭರದಿಂದ ಸಾಗಿದ‌ ಕಾಮಗಾರಿ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳಿಂದ ಕಾಮಗಾರಿ ಬಗ್ಗೆ ಮಾಹಿತಿ ಪಡೆದಿರುವ ಸಚಿವರು, ನವಂಬರ್ 11 ಕ್ಕೆ ಮೋದಿಯವರಿಂದ  108 ಅಡಿಯ ಕಂಚಿನ ಬೃಹತ್ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES