Wednesday, January 22, 2025

ರಾಜ್ಯದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ಬರಬೇಕು; ಜಗ್ಗೇಶ್​​

ಧಾರವಾಡ; ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕುಂದಗೋಳ ಶಾಲೆಗೆ ಬಣ್ಣ ಹಚ್ಚೋ ಮೂಲಕ ಬಣ್ಣದರ್ಪನೆ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು.

ಇಂದು ಕುಂದಗೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗೆ ಬಣ್ಣ ಹಚ್ಚೋ ಮೂಲಕ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಬಣ್ಣದರ್ಪನೆ ಅಭಿಯಾನಕ್ಕೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಸಾಥ್ ನೀಡಿದರು.

ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ನಡೆಯುತ್ತಿರೋ ವಿಶೇಷ ಬಣ್ಣದರ್ಪಣೆ 60 ಕೋಟಿ ರೂ ಅನುದಾನದಲ್ಲಿ 1,117 ಶಾಲೆಗಳಿಗೆ ಬಣ ಬಳಿಯುವ ಅಭಿಯಾನ ಇದಾಗಿದೆ.

ಈ ವೇಳೆ ಮಾತನಾಡಿದ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಾನು ಜೋಶಿ ಅವರನ್ನು ರಾಷ್ಟ್ರಮಟ್ಟದ ಶಕ್ತಿ ಕೇಂದ್ರದಲ್ಲಿ ನೋಡಿದ್ದೇನೆ. ನರೇಂದ್ರ ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಅವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಲ್ಹಾದ್ ಜೋಶಿ ಎಂದು ಜಗ್ಗೇಶ್ ಹಾಡಿ ಹೊಗಳಿದರು.

ಅಂತೆಯೇ ಮಾತನಾಡಿ, ಮನೆಗೆ ಒಬ್ಬ ಯಜಮಾನ ಇರಬೇಕು. ಅದೇ ರೀತಿ ರಾಜ್ಯದಲ್ಲಿ ಪ್ರಲ್ಹಾದ್ ಜೋಶಿ ಇಂದು ಅದ್ಭುತ ಯಜಮಾನಿಕೆ ಮಾಡುತ್ತಿದ್ದಾರೆ.

ರಾಷ್ಟ್ರವನ್ನ ಮುನ್ನಡೆಸುವ ವ್ಯಕ್ತಿ ಸಾಮಾನ್ಯದವರಲ್ಲ. ಅಮೇರಿಕಾ ಹೆದರೋದು ಕೇವಲ ರಷ್ಯಾಗೆ ಮಾತ್ರ, ರಷ್ಯಾದ ಪುಟೀನ್ ಮೋದಿಯನ್ನೇ ಸ್ವಾಭಿಮಾನ ನಾಯಕ ಎಂದು ಹೇಳಿದ್ದಾರೆ. ಮೋದಿ ಅವರನ್ನು ಹೃದಯದಿಂದ ಪ್ರೀತಿಸಬೇಕು. ಮೋದಿಯ ಜೊತೆ ನೀವು ನಿಂತು ಮತ್ತೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ತರಬೇಕು ಎಂದು ಜಗ್ಗೇಶ್ ಹೇಳಿದರು.

RELATED ARTICLES

Related Articles

TRENDING ARTICLES