Wednesday, January 8, 2025

ಪುನೀತ್​ ನೀಡಿದ ಕೊಡುಗೆ ಸ್ಮರಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

ಕೊಪ್ಪಳ; ಜಿಲ್ಲೆಯ ಗಂಗಾವತಿಯ ಮಲೆನಾಡು ಅಂತಲೇ ಹೆಸರಾಗಿರುವ ಆನೆಗೊಂದಿಯ ಭಾಗದಲ್ಲಿ ಪವರ್ ಸ್ಟಾರ್ ಪುನೀತ್ ಅವರ ಹೆಜ್ಜೆ, ನಗು, ಪ್ರೀತಿ ಅಳೆಯದೆ ಉಳಿದಿದೆ. ಅವರು ನಮ್ಮನ್ನು ಲಕ್ಷಾಂತರ ಅಭಿಮಾನಿಗಳನ್ನು ಅಗಲಿ‌ ಇಂದಿಗೆ ಒಂದು ವರ್ಷ ಕಳೆದಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ಜೀವಂತವಾಗಿದ್ದಾರೆ. ಅದರಲ್ಲೂ ಗಂಗಾವತಿಯ ಮಲ್ಲಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಪ್ಪು ಜೀವಂತವಾಗಿದ್ದು, ಇಂದು ಅವರ ಪುಣ್ಯಸ್ಮರಣೆ ಮೂಲಕ ನೆನಪಿಸಲಾಯಿತು.

2020 ರಲ್ಲಿ ಮಲ್ಲಪೂರ ಗ್ರಾಮದ ವಾಣಿ ವೀರಭದ್ರೇಶ್ವರ ಬೆಟ್ಟದಲ್ಲಿ ಜೇಮ್ಸ್ ಚಿತ್ರೀಕರಕ್ಕಾಗಿ ಪುನೀತ ರಾಜಕುಮಾರ್ ಅವರು ಬಂದಿದ್ದರು, ಈ ವೇಳೆ ಮಲ್ಲಪೂರ ಗ್ರಾಮದ ಮುಖಂಡರು ಹಾಗೂ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಅಪ್ಪು ಅವರ ಬಳಿ ತೆರಳಿ ಶಾಲೆಗೆ ನೆರವು ಕೇಳಿದ್ದರು ಅಂದು ಅಪ್ಪು ತಡಮಾಡದೆ ಅವರ ತಂದೆ ಡಾ.ರಾಜಕುಮಾರ್ ಟ್ರಸ್ಟ್ ನಿಂದ 1ಲಕ್ಷ ದೇಣಿಗೆ ನೀಡಿದ್ದರು.

ಹಾಗಾಗಿ ಮಲ್ಲಪೂರ ಮುಖಂಡರು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಇಂದಿಗೆ ಅಪ್ಪು ಅಗಲಿ ಒಂದು ವರ್ಷ ಆಗಿದ್ದರಿಂದ ಅವರ ಪುಣ್ಯಸ್ಮರಣೆ ಆಚರಿಸಿ ಗೌರವಿಸಿದರು.

RELATED ARTICLES

Related Articles

TRENDING ARTICLES