ಚಾಮರಾಜನಗರ: ಕರ್ನಾಟಕದ ಊಟಿ ಎಂದೇ ಪ್ರಕ್ಯಾತಿ ಪಡೆದಿರುವ ಹಿಮದ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಆರಂಭವಾಗಿದೆ. ಮಳೆಯ ಅವಾಂತರಕ್ಕೆ ಹಿಮದ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಬರೋಬ್ಬರಿ 13 ದಿನಗಳ ಬಳಿಕ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಆರಂಭವಾಗಿದೆ. ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಗೋಪಾಲಸ್ವಾಮಿ ಬೆಟ್ಟದ ರಸ್ತೆ ದುರಸ್ಥಿ ಹಿನ್ನಲೆ ಸ್ಥಗಿತಗೊಂಡಿದ್ದ ಬಸ್ ಸಂಚಾರ 13 ದಿನಗಳ ಬಳಿಕ ಮತ್ತೆ ಆರಂಭಗೊಂಡಿದೆ. ಇತ್ತೀಚೆಗೆ ಬಿದ್ದ ಮಳೆಗೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ರಸ್ತೆಯ ಹಲವು ಕಡೆ ರಸ್ತೆ ಕೊರೆದು ಮಂಡಿಯುದ್ದ ಹಳ್ಳಗಳಾಗಿದ್ದ ಕಾರಣ ಅ.16 ರ ಭಾನುವಾರದಂದು ಸಾರಿಗೆ ಬಸ್ ಸಂಚಾರ ನಿಂತಿತ್ತು.
ಇನ್ನು ಅಧಿಕಾರಿಗಳು ಕೊರೆದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ಥಿ ಮಾಡಿಸಿದ್ದು ಎರಡು ಮಿನಿ ಬಸ್ ಗಳ ಸಂಚಾರ ಮತ್ತೇ ಆರಂಭಗೊಂಡಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರ ದಂಡೇ ಹರಿದು ಬರುತ್ತಿದ್ದು ಗೋಪಾಲಸ್ವಾಮಿ ಬೆಟ್ಟವನ್ನು ಕಣ್ತುಂಬಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಮಧ್ಯಾಹ್ನವಾದರೂ ಮಂಜು ಮುಸುಕಿರುವ ವಾತಾವರಣವನ್ನು ಜನರು ಕಣ್ತುಂಬಿಕೊಂಡಿದ್ದಾರೆ.