Monday, December 23, 2024

‘ಗಂಧದಗುಡಿ’ಗೆ ಬೆನ್ನೆಲುಬಾಗಿ ನಿಂತ ರಾಜ್ ಕುಟುಂಬ

ಗಂಧದಗುಡಿಯನ್ನ ಪ್ರತಿಯೊಬ್ಬ ವ್ಯಕ್ತಿಗೆ ರೀಚ್ ಮಾಡಿಸೋಕೆ ಅಂತ್ಲೇ ದೊಡ್ಮನೆಯ ಎಲ್ಲಾ ಸದಸ್ಯರು ಟೊಂಕ ಕಟ್ಟಿ ನಿಂತಿದ್ದಾರೆ. ಅಭಿಮಾನಿ ದೇವರುಗಳು ಕೂಡ ಅವ್ರಿಗೆ ಸಾಥ್ ನೀಡಿದ್ದು, ರಾಜ್ಯಾದ್ಯಂತ 225ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಾವಿರಾರು ಶೋಗಳಿಂದ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ಹಬ್ಬ, ಜಾತ್ರೆಯ ರೀತಿ ಸೆಲೆಬ್ರೇಟ್ ಮಾಡ್ತಿರೋ ಫ್ಯಾನ್ಸ್ ಇದೊಂದು ಮರೆಯಲಾಗದ ಮಾಸ್ಟರ್​ಪೀಸ್ ಅಂತಿದ್ದಾರೆ.

  • ನಾಡದೇವತೆಗೆ ಅಶ್ವಿನಿ ಪೂಜೆ.. ನರ್ತಕಿಯಲ್ಲಿ ದೊಡ್ಮನೆ
  • 225ಕ್ಕೂ ಅಧಿಕ ಥಿಯೇಟರ್ಸ್​.. ಸಾವಿರಾರು ಶೋಗಳು..!
  • 4 ಶೋ ನಡೆಯೋ ಕಡೆ 8 ಪ್ರದರ್ಶನಗಳಿಂದ ಅಪ್ಪು ದರ್ಶನ

ಕರ್ನಾಟಕದ ಅನರ್ಘ್ಯ ರತ್ನ ಪುನೀತ್ ರಾಜ್​ಕುಮಾರ್ ಅವ್ರ ಗಂಧದಗುಡಿ ಸಿನಿಮಾ, ಅವ್ರ ಅಭಿಮಾನಿಗಳು ಹಾಗೂ ಕನ್ನಡಿಗರಿಗಷ್ಟೇ ಅಲ್ಲ, ಇಡೀ ರಾಜ್ ಕುಟುಂಬಕ್ಕೂ ಬಹಳ ವಿಶೇಷ. ಕಾರಣ ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿರೋ ಚಿತ್ರ. ಹಾಗಾಗಿಯೇ ಇಡೀ ಕುಟುಂಬ ಈ ಸಿನಿಮಾದ ಪ್ರಮೋಷನ್​ಗೆ ನಿಂತಿದೆ. ರಾಜಕುಮಾರನ ಕನಸು ನನಸು ಮಾಡೋಕೆ ನಿಂತಿದೆ.

ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಅವ್ರ ಸಹೋದರಿಯರಾದ ಲಕ್ಷ್ಮೀ, ಪೂರ್ಣಿಮಾ, ಯುವ ರಾಜ್​ಕುಮಾರ್, ವಿನಯ್ ರಾಜ್​ಕುಮಾರ್, ಶಿವರಾಜ್​ಕುಮಾರ್ ಹೀಗೆ ಎಲ್ಲರೂ ಗಂಧದಗುಡಿಯ ಘಮಲನ್ನು ಜನತೆಗೆ ಉಣಬಡಿಸೋಕೆ ಸಜ್ಜಾಗಿದ್ರು. ಅದ್ರಂತೆ ಇಂದು ನರ್ತಕಿ ಥಿಯೇಟರ್ ಗೆ ಇಡೀ ರಾಜ್​ ಕುಟುಂಬ ಧಾವಿಸಿ, ಅಭಿಮಾನಿ ದೇವರುಗಳ ಜೊತೆ ಸಿನಿಮಾ ವೀಕ್ಷಿಸಿತು.

ರಾಘಣ್ಣ ಫ್ಯಾನ್ಸ್ ಜೊತೆ ಸ್ಟೆಪ್ ಹಾಕೋ ಮೂಲಕ ಗಮನ ಸೆಳೆದರು.

ಬೈಟ್: ರಾಘವೇಂದ್ರ ರಾಜ್​ಕುಮಾರ್, ನಟ

ಬೈಟ್: ಯುವ ರಾಜ್​ಕುಮಾರ್, ನಟ

ಬೈಟ್: ವಿನಯ್ ರಾಜ್​ಕುಮಾರ್, ನಟ

ಇನ್ನು ಪಿಆರ್​ಕೆ ಒಡತಿ ಅಶ್ವಿನಿ ಅವ್ರು ಅರಮನೆ ನಗರಿ ಮೈಸೂರಿಗೆ ತೆರಳಿ ನಾಡದೇವತೆ ಚಾಮುಂಡಿ ತಾಯಿ, ಶ್ರೀರಂಗಪಟ್ಟಣ, ಮಂಡ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಅವ್ರಿಗೆ ಗಂಧದಗುಡಿ ನಿರ್ದೇಶಕ ಅಮೋಘ ವರ್ಷ ಕೂಡ ಸಾಥ್ ನೀಡಿದ್ದು ಇಂಟರೆಸ್ಟಿಂಗ್.

ಇನ್ನು ಅಭಿಮಾನಿಗಳು ಈ ಸಿನಿಮಾನ ಬರಮಾಡಿಕೊಂಡ ಪರಿ ನಿಜಕ್ಕೂ ಅತ್ಯದ್ಭುತ. ಕಮರ್ಷಿಯಲ್ ಸಿನಿಮಾಗಳಿಗಿಂತ ಜೋರಾಗಿ ಮುಂಜಾನೆ ಆರು ಗಂಟೆಯಿಂದಲೇ ಬೆಂಗಳೂರಿನ ಹತ್ತಾರು ಚಿತ್ರಮಂದಿರಗಳಲ್ಲಿ ಸೆಲೆಬ್ರೇಷನ್ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಈಡುಗಾಯಿ ಹೊಡೆದು, ದೀಪ ಬೆಳಗಿ, ಬೂದಗುಂಬಳ ಹೊಡೆದು, ಕಟೌಟ್​ಗೆ ಹೂವಿನ ಅಲಂಕಾರ ಮಾಡಿ, ಹಾಲಿನ ಅಭಿಷೇಕ ಕೂಡ ಮಾಡಿದ್ರು.

ಸಿಹಿ ಹಂಚೋದ್ರ ಜೊತೆಗೆ ಅನ್ನದಾನ, ರಕ್ತದಾನ ಕಾರ್ಯಕ್ರಮಗಳೂ ನಡೆದವು. ಮಕ್ಕಳಿಂದ ಮುದುಕರವರೆಗೆ ಫ್ಯಾಮಿಲಿ ಸಮೇತ ಎಲ್ರೂ ಸಿನಿಮಾ ನೋಡಿ, ಗಂಧದಗುಡಿ ಬಗ್ಗೆ ಕೊಂಡಾಡಿದ್ರು. ಚಿತ್ರಮಂದಿರಕ್ಕೆ ಕುದುರೆ, ಗೋವು ಸಮೇತ ಬಂದದ್ದು ವಿಶೇಷ.

ಒಂದಷ್ಟು ಅಭಿಮಾನಿಗಳು ಭಾವುಕವಾಗಿ ಮಾತನಾಡಿದ್ರೆ, ಮತ್ತೊಂದಷ್ಟು ಮಂದಿ ನಗು ನಗ್ತಾ ನೋಡ್ಬೇಕು. ಕಣ್ಣೀರು ಹಾಕಬಾರದು ಅಂತ ಸಮಾಧಾನ ಮಾಡೋ ಕಾರ್ಯ ಮಾಡಿದ್ರು.

ಬೊಂಬೆ ಹೇಳುತೈತೆ ಸಾಂಗ್​ನ ಅವ್ರದ್ದೇ ಶೈಲಿಯಲ್ಲಿ ಲಿರಿಕ್ಸ್ ರಚಿಸಿ ಹಾಡಿದ್ರು ತುಳಸಿ ರಾಮ್. ಮಹಿಳಾ ಅಭಿಮಾನಿಗಳು ಅಪ್ಪುನೇ ದೇವರು ಅಂತ ನೋವಿನಿಂದ ಮನದಾಳದ ಮಾತನ್ನ ಪವರ್ ಟೀಂ ಜೊತೆ ಬಿಚ್ಚಿಟ್ಟರು.

ಸಾಕಷ್ಟು ಕಡೆ ಅಪ್ಪು ಅವ್ರು ನಗು ಚೆಲ್ಲಿ, ಪ್ರೀತಿ ಹಂಚಿದಂತೆ ಅವ್ರ ಡೈ ಹಾರ್ಡ್​ ಫ್ಯಾನ್ಸ್ ಶೋಗಳ ಟಿಕೆಟ್ಸ್ ಖರೀದಿಸಿ, ಅನಾಥಾಶ್ರಮದ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ತೋರಿಸೋ ಕಾರ್ಯ ಮಾಡ್ತಿವೆ. ಇದು ನಿಜಕ್ಕೂ ಅಪ್ಪು ಅವ್ರ ಆಶಯ ನೆರವೇರಿದೆ ಅಂದ್ರೆ ತಪ್ಪಾಗಲ್ಲ. ಸಿನಿಮಾ ನೋಡಿದವ್ರು ಅಲ್ಲಿರೋ ಕಿವಿಮಾತನ್ನ ಆಲಿಸಿ, ಪಾಲಿಸಿದ್ರೆ ಗಂಧದಗುಡಿಯ ಉದ್ದೇಶ ಫಲಪ್ರದವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES