Sunday, December 22, 2024

ನದಿಗೆ ಹಾರಿದ್ರೂ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದ ವ್ಯಕ್ತಿ..!

ಗದಗ: ವೈಯಕ್ತಿಕ‌ ಸಮಸ್ಯೆಯಿಂದ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ, ಪವಾಡ ಸದೃಶ್ಯ ರೀತಿಯಲ್ಲಿ ಬದುಕಿಬಂದ ಘಟನೆ ಗದಗ ಹಾಗೂ ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿ ನಡೆದಿದೆ.

ಗದಗ ಹಾಗೂ ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿ ಹರಿತಿರೋ, ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪರಾಗಿರುವುದು, ಎಲ್ಲರಲ್ಲು ಆಶ್ಚರ್ಯ ಮೂಡಿಸಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಪೂರ್ವ ಕಾಲ್ವಿ ಗ್ರಾಮದ ವ್ಯಕ್ತಿ‌ ಶಿವು, ನದಿಯಲ್ಲಿ ಮುಳಗದೇ ಪವಾಡ ರೀತಿಯಲ್ಲಿ ತೇಲುತ್ತಿದ್ದ ವ್ಯಕ್ತಿ‌ಯನ್ನು ಕಂಡು ದಂಗಾದ ಸ್ಥಳಿಯರು. ನದಿಯಲ್ಲಿ ಮಲಗಿದ್ದ ವ್ಯಕ್ತಿ‌ ಕಂಡು ಮೊದಲು ಶವ ಎಂದು ಭಾವಿಸಿದ್ದ ಸ್ಥಳಿಯರು, ಕೈ-ಕಾಲು ಅಲಗಾಡಿಸುವದನ್ನ ಕಂಡು ಕೂಡಲೇ ಹಗ್ಗ ಎಸೆದಿದ್ದ ಸ್ಥಳಿಯರು.

ಹಗ್ಗದ ಸಹಾಯದಿಂದ ನದಿಯಿಂದ ಮೇಲೆ ಬಂದು ಸ್ಥಳಿಯರಲ್ಲಿ ಆಶ್ಚರ್ಯ ಮೂಡಿಸಿದ ಶಿವು, ಸುಮಾರು ಐವತ್ತು ಅಡಿಯಷ್ಟು‌ ಆಳವಿರೋ ನದಿಯಲ್ಲಿ ವ್ಯಕ್ತಿ ಮುಳಗದೇ ಇದ್ದಿದ್ದೇ ರೋಚಕ ಎಂದು ಸ್ಥಳಿಯರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ನದಿಗೆ ಹಾರಿದ್ರೂ ಸಹ ಮುಳಗದೇ ಇರೋ ವ್ಯಕ್ತಿ ಕಂಡು ಸ್ಥಳಿಯರಲ್ಲೂ ಹಲವು ಪ್ರಶ್ನೆ ಮೂಡಿದೆ.

RELATED ARTICLES

Related Articles

TRENDING ARTICLES