Tuesday, December 24, 2024

ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ ಶಾಸಕ ಸಿ ಟಿ ರವಿ

ಬೆಂಗಳೂರು: ಕಳೆದೆರಡು ದಿನಗಳಯಿಂದೆಯಷ್ಟೆ ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ರವರು, ನಗರ ಸ್ವಚ್ಛತೆ ಹಾಗೂ ಆರೋಗ್ಯದ ರಕ್ಷಣೆಗಾಗಿ ಸದಾ ಶ್ರಮಿಸುವ ಪೌರಕಾರ್ಮಿಕ ಮಿತ್ರರ ಕಾಲ್​ತೊಳೆದು ಮತ್ತು ಶಾಲನ್ನು ಹೊದಿಸಿ ಸನ್ಮಾನಮಾಡಿ ಅವರೊಂದಿಗೆ ದಿಪಾವಳಿಯನ್ನು ಆಚರಣೆ ಮಾಡಿದ್ದರು.

ಈಗ ಬೆಂಗಳೂರಿನಲ್ಲಿ ಮುಂಜಾನೆ ನಡಿಗೆ ವೇಳೆಯಲ್ಲಿ, ರಸ್ತೆಬದಿಯಲ್ಲಿದ್ದ ಪೌರಕಾರ್ಮಿಕರನ್ನು ಭೇಟಿಮಾಡಿದ್ದಾರೆ. ಇನ್ನು ಬೆಂಗಳೂರಿನ ತಾರಾಲಯ ಬಳಿ ಪೌರಕಾರ್ಮಿಕರನ್ನು ಭೇಟಿಯಾದ ಸಿಟಿ ರವಿ ರವರು, ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸಿ ಕೆಲವು ಹೊತ್ತು ಮಾತುಕತೆ ನಡೆಸಿದ್ದಾರೆ.

ಪೌರಕಾರ್ಮಿಕರ ಜೊತೆ ಮಾತುಕತೆ ನಡೆಸಿದ ಶಾಸಕರು, ಪೌರಕಾರ್ಮಿಕರನ್ನು ಸರ್ಕಾರ ಖಾಯಂ ಗೊಳಿಸಿದ್ದಕ್ಕೆ ಸಿಎಂ ಗೆ ಹಾಗೂ ಬಿಜೆಪಿ ಸರ್ಕಾರಕ್ಕೆ ಪೌರಕಾರ್ಮಿಕರು ಧನ್ಯವಾದವನ್ನು ತಿಳಿಸಿದ್ದಾರೆ.

 

RELATED ARTICLES

Related Articles

TRENDING ARTICLES