Wednesday, January 22, 2025

ಬಿಜೆಪಿ ನಾಯಕರನ್ನ ಡೋಂಗಿಗಳ್ಳೆಂದ ಮಾಜಿ ಸಿ ಎಂ ಸಿದ್ದರಾಮಯ್ಯ

ಶಿವಮೊಗ್ಗ: ಮಾಜಿ ಸಿ ಎಂ ಸಿದ್ದರಾಮಯ್ಯ ರವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ರವರ ವ್ಥಕ್ತಿತ್ವ ಅನಾವರಣವಾಗಿದೆ.

ಭಾರತ್ರಾ ಜೋಡೋ ಯಾತ್ರೆಯಲ್ಲಿ, ರಾಹುಲ್ ಗಾಂಧಿ ಅವರು 3500 ಕಿ ಮೀ ಪಾದಯಾತ್ರೆ ಮಾಡಿರುವುದ ಸುಲಭವಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷ ಹೆಚ್ಚಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡಿದ್ಥಾರೆ. ಸಹಜ ಸಾವು, ಹೆಣದ ಮೇಲೆ ರಾಜಕೀಯ ಮಾಡಿದ್ದಾರೆ. ಪರೇಶ್ ಮೇಸ್ತಾ ಅಲ್ಪಸಂಖ್ಯಾತರ ಕೊಲೆ ಮಾಡಿದ್ದಾರೆ, ಗಲಾಟೆ ಮಾಡಿದ್ದರು. ನಾನೂ ಪ್ರಕರಣ ತನಿಖೆ ಸಿಬಿಐ ಗೆ ಕೊಟ್ಟಿದೆ. ಅದು ಕೊಲೆ ಅಲ್ಲ ಎನ್ನುವ ವರದಿ ಬಂತು.

2008 ರಿಂದ ಬಿಜೆಪಿ ಸರ್ಕಾರವು ಸಿಬಿಐಗೆ ಯಾವುದೇ ಪ್ರಕರಣ ವಹಿಸಲಿಲ್ಲ. ಬಿಜೆಪಿ ಯೋಗ್ಯತೆ ಇಲ್ಲ. ಒಂದೇ ಒಂದು ಕೇಸ್ ಸಿಬಿಐ ಕೊಟ್ಟಿಲ್ಲ. ಶಿವಮೊಗ್ಗ ದಲ್ಲಿ ಈಶ್ವರಪ್ಪ ಅವರೇ ಗಲಾಟೆ ಮಾಡಿಸಿದ್ದಾರೆ. ಈಶ್ವರಪ್ಪ ಸಚಿವರಾದ ಸಂದರ್ಭದಲ್ಲಿ ಹೆಣದ ಮೇಲೆ ರಾಜಕಾರಣ ಮಾಡಿದ್ದರು.144 ಸೆಕ್ಷನ್ ನಡುವೆ ಹರ್ಷ ಶವಯಾತ್ರೆ ಈಶ್ವರಪ್ಪ ಮಾಡಿದ್ದರು. ಬಿಜೆಪಿ ಮೀಸಲಾತಿಗೆ ವಿರೋಧ ಮಾಡಿದ್ದಾರೆ. ರಾಮುಲುಗೆ ಸಂವಿಧಾನ ಗೊತ್ತಿಲ್ಲ, ಆತ ಒಬ್ಬ ಪೆದ್ದ.ಯಾರೋ ಬರೆದುಕೊಟ್ಟಿದ್ದು ಓದುತ್ತಾನೆ.

ಬಿಜೆಪಿಯನ್ನು ತೊಲಗಿಸಲು ಈಗ ಬಿಜೆಪಿ ಸಂಕಲ್ಪ ಸಮಾವೇಶ ನಡೆಯುತ್ತಿದೆ. 70 ರಿಂದ 80 ಲಕ್ಷ ಕೊಟ್ಟು ಪೊಲೀಸ್ ಇಲಾಖೆ ಯಲ್ಲಿ ಕೊಟ್ಟು ಬರುತ್ತಾರೆ. ಅವರು ಹೇಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ. ಬಿಜೆಪಿ ನಾಯಕರು ಡೋಂಗಿಗಳು. ಬರೀ ಸುಳ್ಳೇ ಹೇಳುತ್ತಾರೆ.
ನಳೀನ್ ಕುಮಾರ್ ಒಬ್ಬ ಜೋಕರ್. ಆತನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.

ನಾನು ಯಾವ ಕ್ಷೇತ್ರ ದಿಂದ ಸ್ಪರ್ಧೆ ಮಾಡಬೇಕು ಎಂದು ಒಂದು ತಿಂಗಳಲ್ಲಿ ಫೈನಲ್ ಆಗುತ್ತದೆ. ಬಾದಾಮಿ.. ವರುಣಾ.. ಚಾಮರಾಜನಗರ. ಕೋಲಾರ ಸೇರಿದಂತೆ ಆರೇಳು ಕ್ಷೇತ್ರ ದಿಂದ ಒತ್ತಡ ಇದೆ. ವರುಣಾ ಕ್ಷೇತ್ರದಲ್ಲಿ ಮಗ ಶಾಸಕನಾಗಿದ್ದಾನೆ.ಮೋದಿ ವಾರಾಣಾಸಿಯಿಂದ ಸ್ಪರ್ಧೇ ಮಾಡಿದರೆ.. ಬೇರೆ ರೀತಿಯಲ್ಲಿ ಬಿಂಬಿಸುತ್ತಿರಿ. ನಾನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ವಿಭಿನ್ನ ವ್ಯಾಖ್ಯಾನ ಮಾಡುತ್ತಾರೆ ಸಿದ್ದು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES