Wednesday, January 22, 2025

ಸಿದ್ದರಾಮಯ್ಯ ಸ್ಟ್ರೆಂಥ್ ಬಗ್ಗೆ ಡಿಕೆಶಿ ಹೇಳಿದ್ದೇನು..?

ಬೆಂಗಳೂರು : ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಕೋಲ್ಡ್ ವಾರನ್ನ ಮಾತ್ರ ನೋಡಿದ್ದೀರಿ. ರಾಹುಲ್ ಗಾಂಧಿ ಸೂಚನೆ ಮೇರೆಗೆ ಪರಸ್ಪರ ಅಪ್ಪಿಕೊಂಡು, ಜೋಡೆತ್ತುಗಳಂತೆ ಒಗ್ಗಟ್ಟು ಪ್ರದರ್ಶಿಸಿರೋದನ್ನೂ ನೋಡಿದ್ದೀರಿ.. ಆದ್ರೆ, ಒಬ್ಬರಿಗೊಬ್ಬರು ಹೊಗಳಿರೋದನ್ನ ನೋಡಿಲ್ಲ. ಅಂತಹ ಸಾಕಷ್ಟು ಆಸಕ್ತಿಕರ ವಿಚಾರಗಳು ಭಾರತ್ ಜೋಡೊ ಯಾತ್ರೆಯಲ್ಲಿ ನಡೆದಿವೆ.

ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿ ಪ್ರಮುಖ ನಾಯಕರು, ಕಾರ್ಯಕರ್ತರ ಜೊತೆ ಸಂವಾದ ನಡೆಸಿದ್ದಾರೆ. ಅದರ ಸುಮಾರು 7 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯನವ್ರ ಕೈ ಹಿಡಿದು ರಾಹುಲ್ ಓಡಿದ್ದು, ಪಂಚೆ ಉಟ್ಟುಕೊಂಡು ಸಿದ್ದರಾಮಯ್ಯ ನೀರಿನ ಟ್ಯಾಂಕ್ ಹತ್ತಿದ್ದು, ಹೀಗೆ ಹಲವು ವಿಡಿಯೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಭಾರತ್ ಜೋಡೊ ಯಾತ್ರೆಯ ಕೊನೆಯ ದಿನ ಸಿದ್ದರಾಮಯ್ಯ, ಡಿಕೆಶಿ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಪ್ರಮುಖ ನಾಯಕರ ಸಮ್ಮುಖದಲ್ಲೇ ಡಿಕೆಶಿ, ಸಿದ್ದು ಇಬ್ಬರ ಬಗ್ಗೆ ಪರಸ್ಪರ ಅಭಿಪ್ರಾಯಗಳನ್ನ ಕೇಳಿ ತಿಳಿದುಕೊಂಡಿದ್ದಾರೆ.

ಹಾಗಾದ್ರೆ, ಅವ್ರ ಸಂವಾದ ಹೇಗಿತ್ತು..? ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳಿಗೆ ಡಿಕೆಶಿ ಹೇಳಿದ್ದೇನು..? ಸಿದ್ದರಾಮಯ್ಯ ಕೊಟ್ಟ ಉತ್ತರ ಹೇಗಿತ್ತು..? ಅನ್ನೋದನ್ನ ನೋಡೋದಾದ್ರೆ.

ಹೀಗೆ ರಾಹುಲ್, ಸಿದ್ದು, ಡಿಕೆಶಿ ನಡುವೆ ಸ್ವಾರಸ್ಯಕರ ವಿಚಾರಗಳು ಚರ್ಚೆ ಆಗುತ್ತೆ.. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವ್ರ ಫಿಟ್ನೆಸ್ ಬಗ್ಗೆಯೂ ಸಂವಾದದಲ್ಲಿ ಚರ್ಚೆ ಆಗುತ್ತೆ.. ಸಿದ್ದು – ರಾಹುಲ್ ಕೈ ಕೈ ಹಿಡಿದು ಓಡೋ ವಿಚಾರ ಪ್ರಸ್ತಾಪ ಆದಾಗ, ನಾನು ಫಿಟ್ ಆಗಿದ್ದೇನೆ ಅಂತಾ ರಾಹುಲ್​ಗೆ ಸಿದ್ದು ಹೇಳ್ತಾರೆ.. ಅಲ್ಲದೇ ಈ ವಯಸ್ಸಿನಲ್ಲೂ ನಾನು ಫಿಟ್ ಆಗಿದ್ದೇನೆ ಎಂದು ಕರ್ನಾಟಕ ಜನರಿಗೂ ಅರ್ಥವಾಗಿದೆ ಅಂತಾ ಸಿದ್ದರಾಮಯ್ಯ ಹೇಳ್ತಾರೆ.

ಇದೆಲ್ಲದರ ಮಧ್ಯೆ ಭಾರತ್ ಜೋಡೊ ವಿಚಾರದಲ್ಲಿ ಕ್ರೆಡಿಟ್ ವಾರ್ ಶುರುವಾಗಿದೆ.. ಯಾರಿಂದ ಐಕ್ಯತಾ ಯಾತ್ರೆ ಸಕ್ಸಸ್ ಆಯ್ತು ಅನ್ನೋ ಜಟಾಪಟಿ ಸದ್ದಿಲ್ಲದೇ ನಡೆಯುತ್ತಿದೆ.. ಕೆಲವರು ಭಾರತ್ ಜೋಡೊ ವೇಳೆ ಸಾಥ್ ಕೊಟ್ಟಿಲ್ಲ. ಮನೆ ಬಿಟ್ಟು ಹೊರಗೆ ಬಂದಿಲ್ಲ ಅನ್ನೋ ಆಪಾದನೆಗಳೂ ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರ್ತಿದೆ.. ಪರೋಕ್ಷವಾಗಿ ಸಿದ್ದು – ಡಿಕೆಶಿ ಟೀಂ ಪಾಲಿಟಿಕ್ಸ್ ಬಗ್ಗೆ ಪ್ರಸ್ತಾಪವಾಗ್ತಿದ್ರೂ, ಯಾರೂ ತುಟಿ ಬಿಚ್ಚಿಲ್ಲ.. ಈ ಬಗ್ಗೆ ಬಿ.ಕೆ ಹರಿಪ್ರಸಾದ್ ಮಾತನಾಡಿದ್ದು, ಇದರ ಕ್ರೆಡಿಟ್​ ಕಾರ್ಯಕರ್ತರಿಗೆ ಮಾತ್ರ ಸಲ್ಲುತ್ತೆ. ಯಾವೊಬ್ಬ ನಾಯಕರಿಗೂ ಸಲ್ಲುವುದಿಲ್ಲ. ಭಾರತ್ ಜೋಡೊ ಯಾತ್ರೆಯಲ್ಲಿ ನಾಯಕರು ಮುಂದೆ ಇದ್ರೂ ಕಾರ್ಯಕರ್ತರೇ ಯಶಸ್ವಿಗೊಳಿಸಿದ್ದಾರೆ ಎಂದ್ರು.

ಅದೇನೇ ಇರಲಿ ಭಾರತ್ ಜೋಡೊಗೆ ಒಂದೊಳ್ಳೆ ರೆಸ್ಪಾನ್ಸ್​ ಸಿಕ್ಕಿದೆ. ಆದ್ರೆ, ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಇಂಥ ಕ್ರೆಡಿಟ್ ವಾರ್, ಕೋಲ್ಡ್ ವಾರ್​ಗಳು ನೆಲ ಕಚ್ಚುವಂತೆ ಮಾಡಬಹುದು.

 ಆನಂದ್ ನಂದಗುಡಿ, ಸ್ಪೆಶಲ್ ಕರೆಸ್ಪಾಂಡೆಂಟ್, ಪವರ್ ಟಿವಿ

RELATED ARTICLES

Related Articles

TRENDING ARTICLES