Saturday, January 11, 2025

ಮೋದಿಗೂ ನನಗೂ ಯಾವುದೇ ವ್ಯತ್ಯಾಸವಿಲ್ಲ; ಬಾಬುರಾವ್​ ಚಿಂಚನಸೂರ್​

ಕಲಬುರಗಿ; ಪ್ರಧಾನಿ ನರೇಂದ್ರ ಮೋದಿಯವರಿಗೂ ನನಗೂ ಏನೇನು ವ್ಯತ್ಯಾಸ ಇಲ್ಲ. ಮೋದಿಯವರಿಗೆ ಹೆಂಡ್ತಿ ಇಲ್ಲ ನನಗೆ ಹೆಂಡ್ತಿ ಇದ್ದಾರೆ ಅಷ್ಟೆ ಎಂದು ಬಿಜೆಪಿ ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಬಿಜೆಪಿ ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್ ಅವರು, ನರೇಂದ್ರ ಮೋದಿಯವರಿಗೂ ನನಗೂ ಏನೇನು ವ್ಯತ್ಯಾಸ ಇಲ್ಲ. ನನಗೂ ಯಾವ ಆಸೆಗಳಿಲ್ಲ ಮೋದಿಯವರಿಗೂ ಯಾವ ಆಸೆಗಳಿಲ್ಲ. ದೇಶಕ್ಕಾಗಿ ದುಡಿಯುವದು ದೇಶವನ್ನ ಬಲಿಷ್ಠ ಮಾಡ್ತಿರೋದು ಮೋದಿ ಎಂದು ಚಿಂಚನಸೂರ್ ಹೇಳಿದರು.

ಮುಂದುವರೆದು ಮಾತನಾಡಿದ ಚಿಂಚನಸೂರ್​, ನನಗೆ ಹಿಂದೂ ಸಮುದಾಯವೇ ತಂದೆ ತಾಯಿ, ಪ್ರಧಾನಿ ಅವರಿಗೆ ಮನೆ, ಮಠಗಳಿಲ್ಲ. ಪ್ರಧಾನಿ ತಾಯಿ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮೋದಿ ಅವರಿಗೆ ಯಾವುದೇ ಆಸೆ ಆಕಾಂಕ್ಷಿಗಳಿಲ್ಲ. ಅವರಿಗೆ ಭಾರತ ಬಲಿಷ್ಠ ರಾಷ್ಟ್ರ ಆಗಬೇಕೆನ್ನುವ ಆಸೆ ಇದೆ. ಮುಂದಿನ ದಿನಗಳಲ್ಲಿ ಇಡೀ ಕರ್ನಾಟಕವೇ ಕೇಸರಿಮಯವಾಗುತ್ತದೆ

 

RELATED ARTICLES

Related Articles

TRENDING ARTICLES