Wednesday, January 8, 2025

‘ಅಪ್ಪು’ಗೆ ಗೀತಗಾಯನ ಸ್ಮರಣೆ

ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮ ಹಿನ್ನೆಲೆ, ರಾತ್ರಿ 12 ಗಂಟೆಯಿಂದ ಗೀತ ನಮನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಶಿವಣ್ಣ, ಹಾಗೂ ರಾಘವೇಂದ್ರ ರಾಜ್​ಕುಮಾರ್​ ಗಾಯನ ಮಾಡಿದರು.

ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್ ವತಿಯಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಮಧ್ಯರಾತ್ರಿ 12ರಿಂದ ಶುರುವಾದ ಅರುಣ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ 3ರವರೆಗೆ ನಡೆಯಿತು. ರಾತ್ರಿ 3 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಉಷಾ ಕೋಕಿಲ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಯಶಸ್ವಿಗೊಂಡಿದೆ.

5.30 ಇಂದ 6.30ರ ತನಕ ಆನೂರು ಅನಂತ ಕೃಷ್ಣ ಶರ್ಮ ವತಿಯಿಂದ ಲಯ ಲಾವಣ್ಯ ಪ್ರೋಗ್ರಾಮ್ ನಡೆಯಿತು. ಬೆಳಿಗ್ಗೆ 7ರಿಂದ 8 ಜೋಟ್ಸಾನಾ ಶ್ರೀಕಾಂತ್ ತಂಡದಿಂದ ವಯೋಲಿನ್ ವಾದನ ನಡೆಯಿತು. ಇನ್ನು ಹಲವು ಕಲಾವಿದರು ಭಾಗಿಯಾಗಿ ರಾತ್ರಿ 12 ರ ವರೆಗೆ ಗೀತಗಾಯನ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES