Wednesday, January 22, 2025

ಪಠ್ಯ ಪುಸ್ತಕದಲ್ಲಿ ಸೇರುತ್ತ ಅಪ್ಪು ಜೀವನ ಚರಿತ್ರೆ..?

ಬೆಂಗಳೂರು:ಇಂದಿಗೆ ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಿಂದ ಕಂಠೀರವ ಸ್ಟೇಡಿಯಂಗೆ ಲಕ್ಷಾಂತರ ಅಭಿಮಾನಿಗಳು ಹರಿದುಬರುತ್ತಿದ್ದಾರೆ.

ಎಲ್ಲರು ಹೇಳುವಂತೆ ಪುನೀತ್ ರಾಜ್ ಕುಮಾರ್ ರವರ ಜೀವನ ಹಾಗೂ ಸಾಧನೆ ಎಲ್ಲರಿಗು ಒಂದು ಮಾದರಿ. ಇಂತಹ ಮಾದರಿ ಜೀವನದ ಕುರಿತು, ಶಾಲಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಗಮನ ಸೆಳೆದ ಅಪ್ಪು ಅಭಿಮಾನಿಗಳು. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ರವರಿಗು ಮನವಿ ಮಾಡಿದ್ದಾರೆ.

ಈಗಾಗಲೇ 6ನೇ ತರಗತಿ ಪಠ್ಯ ದಲ್ಲಿ ಡಾ. ರಾಜ್ ಕುಮಾರ್ ರವರ ಜೀವನ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ. ಇನ್ನು ಅಪ್ಪು ರವರ ಜೀವನದ ಸಾಧನೆಯ ಕುರಿತು, ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತು ಸಾಧನೆಯ ಕಥೆಯನ್ನು ಸೇರಿಸಲು ಆರ್ ಟಿ‌ ನಗರದ ನಿವಾಸದ ಬಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಟಿ ನರಸೀಪುರದ, ಮುಡುಕು ತೊರೆಯ ಅಪ್ಪು ಅಭಿಮಾನಿಗಳಿಂದ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES