Thursday, January 23, 2025

ವಿಶ್ವಕಪ್​​ನಲ್ಲಿ ಕೊಹ್ಲಿ ಮಿಂಚು; ಕೈಕುಲುಕಿ ಶಹಬ್ಬಾಸ್​ಗಿರಿ ಹೇಳಿದ ಗಿಲ್‌ಕ್ರಿಸ್ಟ್

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 53 ಎಸೆತಗಳಲ್ಲಿ ವಿರಾಟ್​ ಕೊಹ್ಲಿ 82 ರನ್ ಅಜೇಯರಾಗಿ ಉಳಿದು ಭಾರತ ಗೆಲುವಿಗೆ ಶ್ರಮಿಸಿದರು. ನಂತರ ಗುರುವಾರ ನೆದರ್ಲ್ಯಾಂಡ್ಸ್ ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 62 ರನ್ ಗಳಿಸಿದರು.

ಈ ಪಂದ್ಯದ ನಡುವೆ ವಿರಾಟ್​ಗೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ಅವರು ವಿರಾಟ್​ಗೆ ಭಾರೀ ಪ್ರಮಾಣದಲ್ಲಿ ಕೈ ಕುಲುಕಿ ಶಹಬ್ಬಾಸ್​ ಗಿರಿ ನೀಡಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಭಾರತ ಪಂದ್ಯದ ಮೊದಲು, ಕೊಹ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅವರೊಂದಿಗೆ ಮಾತನಾಡುತ್ತಿದ್ದಾಗ ಗಿಲ್‌ಕ್ರಿಸ್ಟ್ ಅವರು ವಿರಾಟ್​ ಬಳಿಗೆ ಹೋಗಿ, ತಮ್ಮ ಶಕ್ತಿ ಮೀರಿ ವಿರಾಟ್​ ಜತೆ ಕೈಕುಲುಕಿ ಭುಜ ತಟ್ಟಿದರು. ನಂತರ ಆಟಗಾರನಿಗೆ ಆಲ್​ ದಿ ಬೆಸ್ಟ್​ ಹೇಳಿದರು.

RELATED ARTICLES

Related Articles

TRENDING ARTICLES