Wednesday, January 22, 2025

ಪುನೀತ್ ಸಾಧನೆ ಪಠ್ಯದಲ್ಲಿ ಸೇರಿಸೋದಕ್ಕೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.!

ಬೆಂಗಳೂರು: ದಿವಂಗತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ನಿಧನರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಎಲ್ಲೆಡೆ ಅಪ್ಪು ಮೊದಲ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಇದರ ಮಧ್ಯೆ ನಟ ಪುನೀತ್ ಜೀವನ ಸಾಧನೆ ಶಾಲಾ ಪಠ್ಯ-ಪುಸ್ತಕದಲ್ಲಿ ಸೇರಿಸುವ ವಿಚಾರ ಮೊದಲ ಬಾರಿಗೆ ಬಹಿರಂಗವಾಗಿ ಪ್ರಸ್ತಾಪವಾಗಿದೆ.

ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ವಿಚಾರದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್​ ಬೆಂಗಳೂರಿನಲ್ಲಿ ಮಾತನಾಡಿದ್ದು, ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ಬಗ್ಗೆ ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ತಾರೆ. ಕೆಲವರ ಜೀವನ ಸಾಧನೆ ಸೇರಿಸಬೇಕು ಅಂದಾಗ ವಿಘ್ನ ಬರುತ್ತವೆ.

ಆದರೆ, ಪುನೀತ್​ ಅಂಥವರಿಗೆ ಆ ರೀತಿ ಯಾವುದೇ ಅಡ್ಡಿ ಬರಲ್ಲ. ಹೀಗಾಗಿ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸಬೇಕು. ಮುಂದಿನ ವರ್ಷ ಪರಿಶೀಲನೆ ಮಾಡಿ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Related Articles

TRENDING ARTICLES