ಬೆಂಗಳೂರು: ವಿಶ್ವಕಪ್ ಟಿ-20 ಚುಟುಕು ಪಂದ್ಯಾವಳಿಗಳು ದಿನದಿಂದ ದಿನಕ್ಕೆ ಭಾರೀ ಕೂತುಹಲಕರ ಘಟ್ಟ ತಲುಪುತ್ತಿವೆ. ಹೀಗಾಗಿ ಪಂದ್ಯಗಳಿಗೆ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟಿ-20 ಪಂದ್ಯಗಳು ನಡೆಯುತ್ತಿದ್ದು, ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುವವರ ಸಂಖ್ಯೆ ಹೆಚ್ಚಾಗಿ ಕೇಳುಬರುತ್ತಿರುವ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೊಲೀಸರು 4.68 ಲಕ್ಷ ರೂ ಹಣವನ್ನ ವಶಪಡಿಸಿಕೊಂಡಿದ್ದಾರೆ.
ಅ.8 ರಿಂದ ಅ.23 ರವರೆಗೆ ಒಟ್ಟು 13 ಬೆಟ್ಟಿಂಗ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೂ ಬೆಟ್ಟಿಂಗ್ ಆಡುತ್ತಿದ್ದ 18 ಜನರ ಬಂಧನ ಮಾಡಲಾಗಿದೆ.
ಬೆಂಗಳೂರಿನ ಬಸವೇಶ್ವರನಗರ, ವಿಜಯನಗರ, ಬ್ಯಾಟರಾಯನಪುರ, ಗೋವಿಂದರಾಜನಗರ, ಮಾಗಡಿ ರಸ್ತೆ, ರಾಜರಾಜೇಶ್ವರಿನಗರ, ಸಿಟಿ ಮಾರ್ಕೇಟ್, ಕಾಮಾಕ್ಷಿಪಾಳ್ಯ ಸೇರಿ ಒಟ್ಟು ಸಿಸಿಬಿ ಪೊಲೀಸರು 13 ಕಡೆ ದಾಳಿ ನಡೆಸಿದ್ದರು. ಇನ್ನು ಕ್ರಿಕೆಟ್ ಪಂದ್ಯಾವಳಿಗಳು ಇರುವ ಕಾರಣಕ್ಕೆ ಪೊಲೀಸರ ಕಾರ್ಯಾಚರಣೆ ಕೂಡ ಮುಂದುವರೆದಿದೆ.