Friday, November 22, 2024

ಪೊಲೀಸ್ ಇನ್ಸ್​ಪೆಕ್ಟರ್ ನಂದೀಶ್ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿದ ಬಿ.ಕೆ ಹರಿಪ್ರಸಾದ್​​

ಬೆಂಗಳೂರು: ಬೆಂಗಳೂರಿನ ಕೆಆರ್​.ಪುರ ಪೊಲೀಸ್ ಇನ್ಸ್​ಪೆಕ್ಟರ್​​ ನಂದೀಶ್​ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಾವಿಗೀಡಾದ ಇನ್ಸ್​ಪೆಕ್ಟರ್​​ ನಂದೀಶ್ ಸಾವಿನ ಪ್ರಕರಣ ತನಿಖೆ ಆಗಬೇಕು. ಒಂದು ಬಾರ್ ವಿಚಾರಕ್ಕೆ ಅಮಾನತು ಮಾಡುವಷ್ಟೇ ನಡೆದಿಲ್ಲ. ಇದರ ಹಿಂದೆ ಇನ್ನೂ ಬೇರೇನೋ ಇದ್ದಂತಿದೆ ಎಂದು ಹರಿಪ್ರಸಾದ್​ ಅವರು ಸ್ಪೋಟಕವಾಗಿ ಬಾಂಬ್​ ಸಿಡಿಸಿದ್ದಾರೆ.

ಪೊಲೀಸ್​ ಹುದ್ದೆಯ ಬಗ್ಗೆ ನಾನು ಮೊದಲೇ ಹೇಳಿದ್ದೆ, ಒಂದು ಪೋಸ್ಟಿಂಗ್ ಗೆ 70 ಲಕ್ಷದಿಂದ 2 ಕೋಟಿ ರೂ ತನಕ ಹಣ ನೀಡಿ ಪೋಸ್ಟಿಂಗ್ ಹಾಕಿಸಿಕೊಂಡು ಬರುತ್ತಾರೆ. ಆದರೆ, ಇಲ್ಲಿ ಬೇರೆನೆ ಆಗಿದೆ. ಇದು ಬಿಜೆಪಿಯ ಸಂಸ್ಕೃತಿ, ಇನ್ಸ್​ಪೆಕ್ಟರ್​ ಸಾವು ಗಂಭೀರವಾದ ವಿಚಾರವಾಗಿದೆ. ನಂದೀಶ್ ಅಮಾನತಿನ ಹಿಂದೆ ಅಷ್ಟೇ ಇದ್ದಂತೆ ಇಲ್ಲ. ಅದಕ್ಕಿಂತ ಹೆಚ್ಚಿನದು ಬೇರೆನೋ ಇದೆ. ಹೀಗಾಗಿ ಅವರ ಸಾವಿನ ತನಿಖೆ ಆಗಲೇಬೇಕು ಎಂದು ಬಿಕೆ ಹರಿಪ್ರಸಾದ್​ ಆಗ್ರಹಿಸಿದರು.

ಇನ್ನು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಿರೀಕ್ಷೆ ಮೀರಿ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರ ಕೊಡುಗೆ ಇದೆ. ನಾಯಕರು ಮುಂದಿದ್ದರೂ ಕಾರ್ಯಕರ್ತರೇ ಯಶಸ್ವಿಗೊಳಿಸಿದ್ದಾರೆ. ಇದರ ಸಂಪೂರ್ಣ ಕ್ರೆಡಿಟ್ ಕಾರ್ಯಕರ್ತರಿಗೆ ಸಲ್ಲುತದೆ ಹೊರತು ಯಾವೊಬ್ಬ ನಾಯಕರಿಗೆ ಸಲ್ಲುವುದಿಲ್ಲ ಎಂದರು.

ಕೆಆರ್​ ಪುರ ಪೊಲೀಸ್ ಇನ್ಸ್​ಪೆಕ್ಟರ್​​ ನಂದೀಶ್ ಅವರನ್ನ ಇತ್ತೀಚಿಗೆ ಅಮಾನತು ಮಾಡಲಾಗಿತ್ತು. ಬಾರ್​ ಯೊಂದರ ಜತೆ ಇನ್ಸ್​ಪೆಕ್ಟರ್​ ಕೈಜೋಡಿಸಿದ್ದರು ಎಂದು ಅಮಾನತು ಮಾಡಲಾಗಿತ್ತು. ನಂದಿಶ್​ ಪತ್ನಿ ಈ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದ್ದರು. ಇನ್ನು ಸಂಬಂಧದಲ್ಲಿ ಎಂಎಲ್​ಸಿ ಹೆಚ್​ ವಿಶ್ವನಾಥ್​ ಅವರ ನಂದೀಶ್​ ಅಳಿಯನಾಗಿದ್ದಾನೆ.

RELATED ARTICLES

Related Articles

TRENDING ARTICLES