ಬೆಂಗಳೂರು: ಅಮಾನತುಗೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಿನ್ನೆ ಹೃದಯಾಘಾತದಿಂದ ನಂದೀಶ್ ಸಾವು ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ದಿನ ರಾಜ್ಯದಲ್ಲಿ ಒಂದು ದುರ್ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯ ಹೃದಯಾಘಾತವಾಯ್ತು. ಹೃದಯಾಘಾತ ಆಗಲು ಹಿನ್ನೆಲೆ ಏನು ಅನ್ನೋ ಪ್ರಶ್ನೆ ಬಂದಿದೆ. ನಂದೀಶ್ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗೆ ಆಗಿದೆ ಅಂತ ಅವರ ಧರ್ಮಪತ್ನಿ ಹೇಳಿದ್ದಾರೆ. ಕೆಲಸ ಬೇಡ ಗಂಡಬೇಕು ಎಂದು ಅವರು ಹೇಳಿದ್ದಾರೆ.
ಕೆ.ಆರ್ ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ಇವರ ವ್ಯಾಪ್ತಿಯಲ್ಲಿ ಇತ್ತು. ಬೆಳಗಿನ ಜಾವದವರೆಗೆ ತೆಗೆದಿತ್ತು, ಇದಕ್ಕೆ ಈ ಪೊಲೀಸ್ ಸಹಕಾರವಿತ್ತು ಅಂತ ಸಸ್ಪೆಂಡ್ ಮಾಡಿದ್ದಾರಂತೆ, ಸರ್ಕಾರ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ಓಪನ್ ಮಾಡುವ ಅವಕಾಶ ಕೊಟ್ಟಿದ್ದಾರೆ. ಆ ಪಬ್ ಎಷ್ಟೊತ್ತು ತೆಗೆದಿತ್ತು. ಅಲ್ಲಿ ಯಾರು ಇದ್ದರು, ರಾಜಕಾರಣಿ ಬೆಂಬಲಿಗರು ಎಷ್ಟು ಜನ ಇದ್ದರು
ಅಷ್ಟೊತ್ತಲ್ಲಿ ಯಾರು ಯಾರು ಇದ್ದರು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇನ್ನು ಈ ಪಬ್ನಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಡಾನ್ಸ್ ಮಾಡಿದ್ದಾರೆ ಅಂತ ರಿಫೋರ್ಟ್ ಇದೆ. ಅನಧಿಕೃತವಾಗಿ ಕ್ಯಾಸಿನೋ, ಮಟ್ಕಾ ದಂಧೆ ಕೂಡ ನಡೆಯುತ್ತಿದೆ. ಈ ಪೊಲೀಸ್ ವ್ಯಕ್ತಿ ಹಿನ್ನಲೆಯನ್ನು ತಿಳಿದುಕೊಂಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ ಇವರು ಸಸ್ಪೆಂಡ್ ರಿವೋಕ್ ಗಾಗಿ ಹಲವು ಮುಖಂಡರ ಮನೆಗೂ ಹೋಗಿದ್ದರಂತೆ, ಆದರೆ, ಪೊಲೀಸ್ ಅಧಿಕಾರಿ ಬಳಿ 70 ರಿಂದ 80 ಲಕ್ಷ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡಿರ್ತಾರೆ. ನಂತರ ಹೀಗೆ ಆದಾಗ ಅವರು ಎಲ್ಲಿಂದ ಹಣ ವಸೂಲಿ ಮಾಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರದ ನಿರ್ಧಾರದಿಂದ ಈ ಕಗ್ಗೊಲೆ ಆಗಿದೆ. ಇದರ ಬಗ್ಗೆ ಉನ್ನತ ತನಿಖೆಯಾಗಬೇಕು. ಪೋಸ್ಟಿಂಗ್ ಗೆ ಲಕ್ಷಾಂತರ ಹಣ ಪಡೆದು ಮಾಡುತ್ತಾರೆ. ಅವನು ನಾಲ್ಕು ತಿಂಗಳ ಹಿಂದೆ ಕೊಟ್ಟ ಹಣ ಏನು ಮಾಡಬೇಕು, ಹೈ ಕಮಾಂಡ್ ರಕ್ಷಣೆ ಇದೆ ಅಂತ ಹೀಗೆ ಮಾಡಿದ್ರೆ ಹೇಗೆ? ಹಲವಾರು ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಐದು ಲಕ್ಷ ಸಿಗುತ್ತದೆ. ಇವರೇ ರೇಡ್ ಮಾಡ್ತಾರೆ. ಅಂತಹ ವ್ಯಕ್ತಿಗಳಿಗೆ ಒಳ್ಳೊಳ್ಳೆ ಪೋಸ್ಟಿಂಗ್ ನೀಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪೋಸ್ಟಿಂಗ್ಗೆ ಅವ್ಯವಹಾರ ನಡೆದಂತೆ ನನ್ನ ಸರ್ಕಾರದಲ್ಲಿ ಹೀಗೆ ಆಗಿಲ್ಲ. ಯಾಕಂದ್ರೆ ಮೈತ್ರಿ ಸರ್ಕಾರ ಇತ್ತು, ಬಿಜೆಪಿ ಸರ್ಕಾರದ್ದು ಸದನದಲ್ಲಿ ಹೇಳಿದ್ದೇನೆ. ಸಣ್ಣ ಪುಟ್ಟ ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಏನು ನಡೆಯುತ್ತಿದೆ ತನಿಖೆ ಆಗಲೇ ಬೇಕು. ಎಷ್ಟೊತ್ತು ಬಾರ್, ರೆಸ್ಟೋರೆಂಟ್, ಪಬ್ ಓಪನ್ ಇರುತ್ತದೆ. ನಂದೀಶ್ ಎಂ ಎಲ್ ಸಿಯ ಸಂಬಂಧಿಕರು ಅಂತ ಇದೆ. ಇವರದ್ದೇ ಇಂಥ ಪರಿಸ್ಥಿತಿ ಆದರೆ ಸಣ್ಣ ಹುದ್ದೆಯಲ್ಲಿ ಇರೋವ್ರ ಕಥೆ ಏನು ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಅಮಾನತುಗೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ನಿನ್ನೆ ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹುಣಸೂರು ಮೂಲದ ನಂದೀಶ್, ಇತ್ತೀಚೆಗೆ ಪಬ್ ವೊಂದರ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತುಗೊಂಡಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಇನ್ನು ಸಂಬಂಧದಲ್ಲಿ ಎಂಎಲ್ಸಿ ಹೆಚ್ ವಿಶ್ವನಾಥ್ ಅವರ ಅಳಿಯನಾಗಿದ್ದಾನೆ. ನಿನ್ನೆ ಹೆಚ್ ವಿಶ್ವನಾಥ್ ಅವರು ಅಳಿಯನ ಶವ ನೋಡಲು ಆಸ್ಪತ್ರೆಗೆ ಬಂದಿದ್ದರು.