Monday, December 23, 2024

ಗಂಧದಗುಡಿ ಅಪ್ಪು ಕೊನೆಯ ಚಿತ್ರವಲ್ಲ, ಯಾವಾಗ್ಲೂ ನಮ್ಮ ಜತೆ ಇರ್ತಾರೆ; ಶಿವಣ್ಣ

ಬೆಂಗಳೂರು; ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ ಗಂಧದ ಗುಡಿ‌ ಇಂದು ರಾಜ್ಯಾದ್ಯಂತ ಇಂದು ಗ್ರ್ಯಾಂಡ್​ ರಿಲೀಸ್​ ಆಗಿದೆ.

ಗಂಧದ ಗುಡಿ ಸಿನಿಮಾ ಬಗ್ಗೆ ನಟ ಶಿವರಾಜ್​ಕುಮಾರ್​ ಮಾತನಾಡಿ, ಇಂದು ಸಂಜೆ ಸಿನಿಮಾ ವೀಕ್ಷಣೆ ಮಾಡುತ್ತೇನೆ. ಗಂಧದಗುಡಿ ಅಪ್ಪು ಅವ್ರ ಕೊನೆಯ ಚಿತ್ರ ಅಲ್ಲ. ಇದು ಆರಂಭ, ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದರು.

ಈ ಹಿಂದೆ ಪ್ರಕೃತಿಯ ಬಗ್ಗೆ ಗಂಧದಗುಡಿಯಲ್ಲಿ ಅಪ್ಪಾಜಿ ತೆರೆ ಮೇಲೆ ತೋರಿಸಿದ್ದರು. ಅದರಿಂದ ಅದೆಷ್ಟೋ ಜನ ಪ್ರೇರಣೆಯಾಗಿದ್ರು, ನನ್ನ ಅದೃಷ್ಟ ನಾನು ಗಂಧದಗುಡಿ ಪಾರ್ಟ್ 2 ಮಾಡಿದ್ದೆ. ಇಂದು ಅತಿವೃಷ್ಠಿ ಆಗ್ತಿದೆ. ಪ್ರಕೃತಿಯಲ್ಲಿ ಏರೇಪೇರು ಆಗ್ತಿದೆ. ಕಾಡಿನ ಮಹತ್ವದ ಬಗ್ಗೆ ಈಗ ಅಪ್ಪು ತಿಳಿಸಿದ್ದಾರೆ.

ಥೇಟರ್​ಗಳಲ್ಲಿ ಅಪ್ಪು ನೋಡಲು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಹೋಗುತ್ತಿದ್ದು, ಉತ್ತಮ ರೆಸ್ಪನ್ಸ್​ ಪಡೆದುಕೊಳ್ಳುತ್ತಿದೆ. ಅಭಿಮಾನಿಗಳು ಅಪ್ಪುವನ್ನ ನೋಡಲು ಬರಬೇಕು. ಅವ್ರಿಗೆ ಈ ಮೂಲಕ ಗೌರವ ಕೊಡಬೇಕು ಎಂದು ಶಿವಣ್ಣ ಹೇಳಿದರು.

RELATED ARTICLES

Related Articles

TRENDING ARTICLES