Monday, December 23, 2024

ಮೃತಪಟ್ಟ ಕಾರ್ಯಕರ್ತನ ಕುಟುಂಬಸ್ಥರಿಗೆ 10 ಲಕ್ಷ ರೂ ಚೆಕ್​ ವಿತರಿಸಲಿರುವ ಡಿ.ಕೆ ಶಿವಕುಮಾರ್​​

ಶಿವಮೊಗ್ಗ: ಇಂದು ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಭೇಟಿ ನೀಡಿ ಕಾರ್ಯಕರ್ತನಿಗೆ ಚೆಕ್​ ವಿತರಣೆ ಮಾಡಲಿದ್ದಾರೆ.

ಇತ್ತೀಚಿಗೆ ರಾಜ್ಯದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ರಸ್ತೆ ಅಪಘಾತದಲ್ಲಿ ರಮೇಶ್ ಮೃತಪಟ್ಟಿದ್ದ. ಇಂದು ರಮೇಶ್​ ನಿವಾಸಕ್ಕೆ ಭೇಟಿ ನೀಡಿ ಪರಿಹಾರ ಕೊಡಲಿದ್ದಾರೆ.

ಸಾಗರ ತಾಲೂಕಿನ ಹುತ್ತಾದಿಂಬಾ ಗ್ರಾಮದ ನಿವಾಸಿಯಾದ ರಮೇಶ್, ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ರಮೇಶ್ ಕುಟುಂಬಸ್ಥರಿಗೆ ಕೆಪಿಸಿಸಿ ವತಿಯಿಂದ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿತ್ತು. ಈಗ ಕುಟುಂಬಸ್ಥರಿಗೆ ಪರಿಹಾರ ಹಣದ ಚೆಕ್​ನ್ನ ಡಿ.ಕೆ ಶಿವಕುಮಾರ್​ ಅವರು ವಿತರಿಸಲಿದ್ದಾರೆ.

RELATED ARTICLES

Related Articles

TRENDING ARTICLES