Wednesday, January 22, 2025

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಆ 8 ಯುವತಿಯರ ನಂಟು.?

ರಾಮನಗರ; ನೆಲಮಂಗಲ ತಾಲ್ಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್​ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ದಿನ ದಿನಕ್ಕೂ ಮೇಘಾ ಟ್ವಿಸ್ಟ್​ ಸಿಗುತ್ತದೆ.

ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಇತ್ತೀಚಿಗೆ ಸ್ವಾಮೀಜಿಯ ಆಡಿಯೋ ಸಮೇತ ಇರುವ ವಿಡಿಯೋ ವೈರಲ್ ಆಗಿತ್ತು. ಪೋಲಿಸ್ ತನಿಖೆಯಿಂದ ಸ್ವಾಮೀಜಿಯ ಕುರಿತು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಬೇರೊಬ್ಬರಿ 8 ಯುವತಿಯರು ಸ್ವಾಮೀಜಿಯನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಲು ಪ್ರಯತ್ನಿಸಿದ್ದರಂತೆ ಹೇಳಲಾಗಿದೆ.

ಇತ್ತೀಚಿಗೆ ಸ್ವಾಮೀಜಿಯ ಪೋನ್ ತೀವ್ರ ತನಿಖೆಗೆ ಒಳಪಡಿಸಿದಾಗ ಸ್ವಾಮೀಜಿ ಜತೆಗೆ ನಿರಂತರವಾಗಿ 8 ಯುವತಿಯರು ವಿಡಿಯೋ ಕಾಲ್ ಮಾಡುತ್ತಿದ್ದರಂತೆ, ಆ 8 ಯುವತಿಯರ ಜೊತೆಗೆ ಕೂಡ ಸ್ವಾಮೀಜಿ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಇದೆ.

ಇನ್ನು ಸ್ವಾಮೀಜಿಯ ಮತ್ತಷ್ಟು ವಿಡಿಯೋಗಳು ಆ 8 ಯುವತಿಯರ ಗ್ಯಾಂಗ್ ಬಳಿ ಇದೆಯಂತೆ. ಸ್ವಾಮೀಜಿಯ ಪೂರ್ತಿ ನಗ್ನ ವಿಡಿಯೋಗಳನ್ನು ಯುವತಿಯರ ಗ್ಯಾಂಗ್​ ರೆಕಾರ್ಡ್ ಮಾಡಿಕೊಂಡಿದೆಯಂತೆ, ಇದೀಗ ಆ 8 ಯುವತಿಯರ‌ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ.

ಶ್ರೀಗಳನ್ನು ಖೆಡ್ಡಾಗೆ ತೋಡಲು ಮಾಸ್ಟರ್ ಪ್ಲಾನ್ ಮಾಡಿತ್ತಂತೆ ಈ ಯುವತಿರ ಗ್ಯಾಂಗ್​, ಹನಿಟ್ರ್ಯಾಪ್​​ಗೆ ಹೊರ ರಾಜ್ಯದ ಯುವತಿಯರನ್ನು ಸ್ವಾಮೀಜಿ ವಿರೋಧಿ ಗ್ಯಾಂಗ್​ ಬಳಸಿಕೊಂಡಿತಾ ಎಂಬ ಪ್ರಶ್ನೆ ಉದ್ಭವವಾಗಿದೆ.

RELATED ARTICLES

Related Articles

TRENDING ARTICLES