ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ಕುಮಾರ್ಗೆ ಇಂದಿನಿಂದ ಗಂಟೆಗಳ ಗಾಯನ ನಮನ ಇರಲಿದೆ ಎಂದು ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧು ಕೋಕಿಲಾ ಅವರು, ಕಂಠೀರವ ಸ್ಟೂಡಿಯೋದಲ್ಲಿ ಅಪ್ಪು ಗಾಯನ ನಮನ ನೆರವೇರಲಿದೆ. ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12ರ ತನಕ ಗಾಯಕರಿಂದ ನಮನ ಇರಲಿದೆ ಎಂದರು.
ಕರ್ನಾಟಕದ ಮ್ಯೂಸಿಕ್ ಅಸೋಸಿಯೇಷನ್ ವತಿಯಿಂದ ಈ ಅಪ್ಪು ಗಾಯನ ನಮನ ಹಮ್ಮಿಕೊಳ್ಳಲಾಗಿದ್ದು, ಇಂದು ರಾತ್ರಿ 12 ಗಂಟೆಗೆ ಗಾಯನ ನಮನ ಶುರುವಾಗುತ್ತದೆ. ಸಿನಿ ಕಲಾವಿದರು ಸೇರಿ ಗಾಯಕರು ಈ ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಅಜಯ್ ವಾರಿಯರ್, ಶ್ರೀ ಹರ್ಷ, ಹರಿ ಕೃಷ್ಣ, ರವಿ ಶಂಕರ್ ಗೌಡ ಸೇರಿ 100 ಗಾಯಕರಿಂದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುಮಾರು 100 ಗಾಯಕರು ಭಾವಪೂರ್ಣ ಹಾಡುಗಳು ಹೇಳಲಾಗುತ್ತದೆ. ಡಾ.ರಾಜಕುಮಾರ್ ಹಾಡುಗಳು, ಹಾಡುಗಳು, ಭಕ್ತಿಗೀತೆಗಳು, ಭಾವಗೀತೆಗಳು ಹಾಗೂ ಅಪ್ಪು ಹಾಡುಗಳು ಹಾಗೂ ಭಾವ ಗೀತೆಗಳನ್ನು ಹಾಡಲಾಗುತ್ತದೆ. ಪುನೀತ್ ರಾಜ್ ಕುಮಾರ್ ಅವರ ಗೀತೆಗಳನ್ನ ಹಾಡಲಾಗುತ್ತದೆ ಎಂದು ಸಾಧು ಕೋಕಿಲ ಅವರು ತಿಳಿಸಿದರು.
ಇನ್ನು ಈ ಕಾರ್ಯಕ್ರಮಕ್ಕೆ ವಾದ್ಯಗೋಷ್ಢಿ ಕಲಾವಿದರು, ದೊಡ್ಡ ದೊಡ್ಡ ನಟರು ಉಪಸ್ಥಿತರಿರಲಿದ್ದಾರೆ. ಭಾವಪೂರ್ಣ ಇರುವ ಹಾಡುಗಳನ್ನ ಮಾತ್ರ ಇಲ್ಲಿ ಹಾಡಲಾಗುತ್ತದೆ. ಅಪ್ಪು ಅಭಿಮಾನಗಿಳು ಫ್ಯಾನ್ಸ್ ಬಂದು ನೋಡಿಕೊಂಡು ಹೋಗಬಹುದು ಎಂದು ಸಾಧು ಕೋಕಿಲ ಹೇಳಿದರು.