Monday, December 23, 2024

ವಾಸುಕಿ ಬಾಳಲ್ಲಿ ‘ಚಂದನ’ ಗೊಂಬೆಯ ‘ವೈಭವ’ದ ತೇರು..!

ಬಿಗ್​ಬಾಸ್​ಗೆ ಹೋಗಿ ಬರೋ ಸಾಕಷ್ಟು ಕಂಟೆಸ್ಟೆಂಟ್ಸ್​ಗೆ ಅಲ್ಲಿ ಸ್ನೇಹವಾಗಿ, ನಂತ್ರ ಅದು ಪ್ರೀತಿಯಾಗಿ ಮಾರ್ಪಟ್ಟು, ಸಪ್ತಪದಿವರೆಗೂ ಬಂದಿದೆ. ಅದೇ ರೀತಿ ಗಾಯಕ ವಾಸುಕಿ ವೈಭವ್ ಹಾಗೂ ನಟಿ ಚಂದನಾ ಜೋಡಿ ಕೂಡ ಮೋಡಿ ಮಾಡೋ ಮನ್ಸೂಚನೆ ನೀಡಿದೆ. ಅದ್ಯಾಕೆ ಅನ್ನೋದಕ್ಕೆ ಇಲ್ಲಿರೋ ಫೋಟೋಶೂಟ್ ಕಹಾನಿ ಪುಷ್ಟಿ ನೀಡಿದೆ.

  • ಮೂರು ವರ್ಷದಿಂದ ಕಾದ ಪ್ರತಿಫಲ ಈ ಫೋಟೋಶೂಟ್..?
  • ಗಾಸಿಪ್ಸ್ ಎಲ್ಲಾ ನಿಜಾನಾ..? ಇವ್ರದ್ದು ಸ್ನೇಹನಾ, ಪ್ರೀತೀನಾ..?
  • ಸೆಲೆಬ್ರಿಟಿ ಕಪಲ್​ಗಳ ಲಿಸ್ಟ್​ ಸೇರ್ತಾರಾ ವಾಸುಕಿ & ಚಂದನ..?

ರಾಮ ರಾಮ ರೇ ಚಿತ್ರದಿಂದ ಬೆಳಕಿಗೆ ಬಂದ ಸಂಗೀತ ಸಂಯೋಜಕ ಕಮ್ ಗಾಯಕ ಅಂದ್ರೆ ಅದು ವಾಸುಕಿ ವೈಭವ್. ಅಲ್ಲಿಂದ ಸಾಲು ಸಾಲು ಚಿತ್ರಗಳಿಗೆ ಮೆಲೋಡಿ ಹಾಡುಗಳನ್ನ ಕಂಪೋಸ್ ಮಾಡಿರೋ ವಾಸುಕಿ, ನಟನಾಗಿಯೂ ಸಹ ಐದಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇವ್ರ ಕಂಠಕ್ಕೆ ಮನಸೋಲದವರೇ ಇಲ್ಲ. ಅಷ್ಟೊಂದು ಮಧುರವಾಗಿ, ಸೊಗಸಾಗಿ ಹಾಡ್ತಾರೆ ವಾಸುಕಿ ವೈಭವ್.

ಇನ್ನು ಇವ್ರಿಗೆ ಸಂಗೀತಲೋಕದ ಜೊತೆ ಬಹುದೊಡ್ಡ ಹೆಸ್ರು ತಂದುಕೊಟ್ಟ ಮತ್ತೊಂದು ಪ್ಲಾಟ್​​ಫಾರ್ಮ್​ ಅಂದ್ರೆ ಬಿಗ್​ಬಾಸ್ ಸೀಸನ್-7. ಯೆಸ್.. ಬಿಗ್ ಮನೆಯ ಒಳಹೊಕ್ಕ ವಾಸುಕಿ, ಅಲ್ಲಿ ತಮ್ಮ ಸಹಪಾಠಿಗಳ ಜೊತೆ ವೈಭವೋಪೇತವಾಗಿ ಆಟವಾಡಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಬಂದ್ರು. ಆದ್ರೆ ಬರೋಕೂ ಮುನ್ನ ಈ ಗಂಧದಗುಡಿಯ ಹೊನ್ನಿನ್ನ ಸೌಂದರ್ಯದ ಚಂದನದ ಗೊಬೆ ಚಂದನ ಅವ್ರ ಸ್ನೇಹ ಕೂಡ ಹೊತ್ತು ಬಂದ್ರು.

ಹೌದು.. ಕಿರುತೆರೆಯ ನಟಿ ಚಂದನಾ ಕೂಡ ಬಿಗ್​ಬಾಸ್ ಸೀಸನ್ 7ರ ಸ್ಫರ್ಧಿ ಆಗಿದ್ರು. ಆಗ ಪರಸ್ಪರ ಇವ್ರು ಸ್ನೇಹಿತರಾದ್ರು. ಮನೆಯಿಂದ ಹೊರಬಂದ ಮೇಲೂ ಇವ್ರ ಬಗ್ಗೆ ಒಂದಷ್ಟು ಗಾಸಿಪ್​ಗಳು ಕೇಳಿಬಂದವು. ಆದ್ರೆ ಇವ್ರು ಮಾತ್ರ ಏಯ್ ಏನಿಲ್ಲಾ ಏನಿಲ್ಲಾ.. ನಾವು ಜಸ್ಟ್ ಫ್ರೆಂಡ್ಸ್ ಅಷ್ಟೇ ಅಂತ ಹೇಳಿಕೊಳ್ತಾನೇ ಇದ್ರು. ಬರ್ತ್ ಡೇ ಗಳಿಗೆ ಒಟ್ಟಿಗೆ ಸೇರೋದು, ಹಬ್ಬ ಹರಿದಿನಗಳಿಗೆ ಒಂದು ಕಡೆ ಸೇರಿಕೊಂಡು ಸೆಲೆಬ್ರೇಟ್ ಮಾಡೋದು ಸರ್ವೇ ಸಾಮಾನ್ಯ ಆಯ್ತು.

ಇದೀಗ ದೀಪಾವಳಿ ಹಬ್ಬದ ವಿಶೇಷ ಇಬ್ಬರೂ ಟ್ರೆಡಿಷನಲ್ ಔಟ್​ಫಿಟ್​​ನಲ್ಲಿ ಮಿಂಚ್ತಿರೋ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಗಾಸಿಪ್​ಗಳಿಗೆ ಇದು ಮತ್ತಷ್ಟು ಪುಷ್ಠಿ ನೀಡಿದಂತೆ ಭಾಸವಾಗಿದ್ದು, ಇವ್ರ ಮಧ್ಯೆ ಏನೋ ಇತ್ತು. ಇದೀಗ ಕಮಿಟ್ ಆಗಿದ್ದಾರೆ ಅನ್ನುವಂತೆ ಬಿಂಬಿಸಲಾಗ್ತಿದೆ. ಅದು ನಿಜವೋ ಸುಳ್ಳೋ ಅನ್ನೋದನ್ನ ಸ್ವತಃ ವಾಸುಕಿ ವೈಭವ್ ಹಾಗೂ ಚಂದನ ಜೋಡಿಯೇ ಸ್ಪಷ್ಟ ಪಡಿಸಬೇಕಿದೆ.

ಆದ್ರೆ ಪವರ್ ಟಿವಿಗೆ ಗಾಯಕ ವಾಸುಕಿ ವೈಭವ್ ನೀಡಿರೋ ಮಾಹಿತಿ ಪ್ರಕಾರ ನಾವು ಫ್ರೆಂಡ್ಸ್ ಅಷ್ಟೇ. ಡಿಸೈನರ್ ಒಬ್ರು ಮೂರು ವರ್ಷದಿಂದ ಈ ಬಗೆಯ  ಪೋರ್ಟ್​ಪೋಲಿಯೋಗೆ ಪ್ಲಾನ್ ಮಾಡ್ತಿದ್ರು. ಅದಕ್ಕೆ ಸಮಯ ಈಗ ಕೂಡಿಬಂತು ಅಷ್ಟೇ. ಬೇರೇನೂ ಇಲ್ಲ ಎಂದಿದ್ದಾರೆ. ಆದ್ರೆ ಈ ಕ್ಯೂಟ್ ಜೋಡಿ ನಿಜ ಜೀವನದಲ್ಲಿ ಒಂದಾದ್ರೆ ಇದಕ್ಕಿಂತ ಖುಷಿ ಮತ್ತೇನೂ ಇರಲ್ಲ ಅನ್ನೋದು ಸಿನಿಪ್ರಿಯರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES