Saturday, January 11, 2025

ಪೊಲೀಸರ ಮೇಲೆ ದಾಳಿ ನಡೆಸಿ, ಪರಾರಿಯಾಗುತ್ತಿದ್ದ ಆರೋಪಿ ಮೇಲೆ ಗುಂಡು

ಶಿವಮೊಗ್ಗ; ವೆಂಕಟೇಶ ನಗರದ ವಿಜಯ್ ಎಂಬುವರ ಕೊಲೆಗೆ ಸಂಬಂಸಿದಂತೆ ಎ1 ಆರೋಪಿ ಜಬಿ (23) ಮಹಜರ್‍ಗೆ ಹೋದ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ಅವರು, ಈತನ ಮೇಲೆ ಸುಲಿಗೆ, ಡರೋಡೆ, ಕೊಲೆಯತ್ನ, ಗಾಂಜಾ ಮತ್ತು ಇತರೆ ಪ್ರಕರಣಗಳು ಸೇರಿ 11 ಪ್ರಕರಣಗಳು ದಾಖಲಾಗಿವೆ. ಈತನ ಸಹಚರ ದರ್ಶನ್ (21) ಮೇಲೆ ಸುಲಿಗೆ, ಡರೋಡೆ, ಮತ್ತು ಇತರೆ ಪ್ರಕರಣಗಳು ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ಕಾರ್ತಿಕ್ ಯಾನೆ ಕಟ್ಟೆ ಕಾರ್ತಿಕ್ (21) ಮೇಲೆ ಈ ಹಿಂದೆ 3 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಲು ಬಳಸಿದ್ದ ಆಯುಧವನ್ನು ಬಚ್ಚಿಟ್ಟ ಸ್ಥಳವಾದ ಸಾಗರ ರಸ್ತೆ ಹೋಟೆಲ್‍ ವೊಂದರ ಹಿಂಭಾಗ ಚಾನೆಲ್ ಹತ್ತಿರ ಆರೋಪಿ ಜಬಿಯನ್ನು ಕರೆದುಕೊಂಡು ಹೋದಾಗ, ಜಬಿಯು ಕೃತ್ಯಕ್ಕೆ ಬಳಸಿದ ಆಯುಧವನ್ನು ತೆಗೆದುಕೊಂಡು, ಬೆಂಗಾವಲು ಕರ್ತವ್ಯದಲ್ಲಿದ್ದ ಸಿಬ್ಬಂದಿ ರೋಷನ್‍ರವರಿಗೆ ಹಲ್ಲೆ ಮಾಡಲು ಮುಂದಾಗಿದ್ದ. ಇದರಿಂದ ರೋಷನ್ ತಪ್ಪಿಸಿಕೊಂಡಿದ್ದು ಅವರಿಗೆ ಗಾಯವಾಗಿತ್ತು ಎಂದರು.

ಈ ಸಂದರ್ಭದಲ್ಲಿ ಸಿಪಿಐ ಹರೀಶ್ ಕೆ. ಪಾಟೀಲ್ ತಮ್ಮ ಮತ್ತು ಸಿಬ್ಬಂದಿಯವರ ರಕ್ಷಣೆಗಾಗಿ ಜಬಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES