ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ದೊಡ್ಡ ಘೋಷಣೆ ಮಾಡಿದ್ದು, ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ (ಗುತ್ತಿಗೆ) ಸಮಾನ ವೇತನ ಘೋಷಣೆ ಮಾಡಿದೆ.
ಕ್ರಿಕೆಟ್ನ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಆಟಗಾರರಿಗೆ ಟೆಸ್ಟ್, ಏಕದಿನ ಮತ್ತು ಟಿ-20 ಕ್ರಿಕೆಟ್ ಪಂದ್ಯಗಳಿಗೆ ಸಮಾನ ರೀತಿಯ ವೇತನ ನೀಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ.
ಈ ಐತಿಹಾಸಿಕ ನಿರ್ಧಾರದಿಂದ ಪುರುಷ ಕ್ರಿಕೆಟ್ ತಂಡ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಸಿಗುವ ವೇತನ ಇನ್ನು ಮುಂದೆ ಮಹಿಳಾ ಕ್ರಿಕೆಟ್ ಆಟಗಾರರಿಗೂ ಸಿಗಲಿದೆ. ನೂತನ ಘೋಷಣೆಯ ಪ್ರಕಾರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಇನ್ನು ಮುಂದೆ ಆಡುವ ಪ್ರತಿ ಟೆಸ್ಟ್‌ಗೆ 15 ಲಕ್ಷ ರೂಪಾಯಿ, ಏಕದಿನ ಕ್ರಿಕೆಟ್ ಪಂದ್ಯಕ್ಕೆ 6 ಲಕ್ಷ ಮತ್ತು ಟಿ-20 ಪ್ರತಿ ಪಂದ್ಯಕ್ಕೆ 3 ಲಕ್ಷ ರೂಪಾಯಿ ವೇತನ ಪಡೆಯಲಿದ್ದಾರೆ.
ಬಿಸಿಸಿಐನ ಈ ನಿರ್ಧಾರವನ್ನೂ ಟ್ವೀಟ್‌ನಲ್ಲಿ ಬಿಸಿಸಿಐ ಕಾರ್ಯರ್ಶಿ ಜಯ್ ಶಾ ತಿಳಿಸಿದ್ದಾರೆ.
ಮಹಿಳಾ ಕ್ರಿಕೆಟಿಗರನ್ನು ಮ್ಯಾಚ್ರಿಗೆ ಪುರುಷರಿಗೆ ಸರಿಸಮನಾಗಿ ನೀಡುವ ಸಮಾನ ವೇತನವನ್ನ ನಿರ್ಧಾರವು ಹಲವು ರೀತಿಯಲ್ಲಿ ಮಹತ್ವದ ನಿರ್ಧಾರವಾಗಿದೆ.