Wednesday, January 22, 2025

ಜೋಡೊ ಯಾತ್ರೆ ಓಡೋ ಯಾತ್ರೆ; ಸಚಿವ ಆರ್ ಅಶೋಕ್ ವ್ಯಂಗ್ಯ

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಎಂಟು ದಿನಗಳ ಕಾಲ ಸಂಚರಿಸಲಿರುವ  ಕೆಂಪೇಗೌಡ ರಥಯಾತ್ರೆಗೆ ಸಚಿವ ಆರ್ ಆಶೋಕ್ ಅವರು ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್ ಅವರು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಉತ್ತರ-ದಕ್ಷಿಣ ಪಾದಯಾತ್ರೆ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗಲೇ ಉತ್ತರ-ದಕ್ಷಿಣ ಎನ್ನುತ್ತಿದ್ದಾರೆ. ರಾಹುಲ್ ಗಾಂಧಿ ಜೋಡೊ ಯಾತ್ರೆ ಓಡೋ ರೀತಿ ಯಾತ್ರೆಯಾಗಿದೆ. ಕಾಂಗ್ರೆಸ್ ಯಾತ್ರೆಯಿಂದ ಮಾನ-ಮರ್ಯಾದೆ ಹೋಯ್ತು ಹೊರತು ಲಾಭ ಇಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಾದಯಾತ್ರೆಗಳು ಅವರು ಅಸ್ಥಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಪಾದಯಾತ್ರೆಗಳು ಮಾಡುವುದರಿಂದ ಯಾರಿಗೆ ಯಾವುದೇ ಲಾಭ ಇಲ್ಲ. ಜೋಡೊ ಮಾಡಿದವರೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನ ಮುಚ್ಚಿ ತೋಡೊ ಮಾಡುತ್ತಿದ್ದಾರೆ. ಸರ್ಕಾರ ಇದ್ದಾಗ ಭಾಗ್ಯಗಳು ಕೊಟ್ಟವರು 120 ರಿಂದ 70ಕ್ಕೆ ಯಾಕೆ ಇಳಿದರು. ಗುಲ್ಬರ್ಗಾದಲ್ಲಿ ಗೆಲ್ಲಕ್ಕಾಗಿಲ್ಲ ಇನ್ನೂ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಕೆಲವರಿಗೆ ನೆಲೆ ಇಲ್ಲದೆ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಬಾದಾಮಿ, ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದು ಯಾಕೆ. ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ, ನಮ್ಮದು ಹಿಂದುತ್ವ ಆಧಾರದ‌ ಮೇಲೆ ಅಧಿಕಾರಕ್ಕೆ ಬರುತ್ತದೆ. ಒಕ್ಕಲಿಗ ಮೀಸಲಾತಿ ವಿಚಾರವಾಗಿ ಸ್ವಾಮೀಜಿ ಜೊತೆ ಮಾತನಾಡಿದ್ದೇನೆ. ಒಕ್ಕಲಿಗರು ಪೆನ್ ಹಿಡಿಯಬೇಕು ಎಂಬ ಸ್ವಾಮೀಜಿ ಹೇಳಿಕೆ ವಿಚಾರ. ನನಗೆ ಅಂತಹ ಯಾವುದೇ ಆಸೆ ಇಲ್ಲ, ಈಗಾಗಲೇ ಸಿಎಂ ಎಂದುಕೊಂಡವರು ಏನಾಗಿದ್ದಾರೆ ಎಂದು ನಮಗೆ ಗೊತ್ತಿದೆ ಎಂದು ಆರ್​ ಅಶೋಕ್​ ತಿಳಿಸಿದರು.

ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ. ನಾನು ಈಗಾಗಲೇ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಕುಮಾರಸ್ವಾಮಿ ರವರ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ, ಅವರು ಚುನಾವಣೆಯಲ್ಲಿ ಎರಡಂಕಿ ದಾಟುವುದಿಲ್ಲ ಎಂದು ಆರ್​ ಅಶೋಕ್​ ಭವಿಷ್ಯ ನುಡಿದರು.

RELATED ARTICLES

Related Articles

TRENDING ARTICLES