ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಬಗೆದಷ್ಟು ಬಯಲಾಗ್ತಿದೆ. ತನಿಖೆ ನಡೆಸ್ತಿರೋ ಸಿಐಡಿ ಬರೋಬ್ಬರಿ 43 ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅಕ್ರಮದ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪೌಲ್ ಸಹ ಜೈಲು ಹಕ್ಕಿಯಾಗಿದ್ದಾರೆ. ಜೈಲಿಂದ ಹೊರಬರಲು ಹರಸಾಹಸಪಡ್ತಿದ್ದಾರೆ. ಜಾಮೀನಿಗಾಗಿ ಅರ್ಜಿ ಮೇಲೆ ಅರ್ಜಿ ಸಲ್ಲಿಸಿದ್ರೂ, ಬಿಡುಗಡೆಯ ಭಾಗ್ಯ ದೊರೆತಿರಲಿಲ್ಲ. ಸಿಐಡಿ ಅಧಿಕಾರಿಗಳು 43 ಆರೋಪಿಗಳ ಮೇಲೆ ದೋಷಾರೋಪಣ ಪಟ್ಟಿಯನ್ನ ಕೋರ್ಟ್ಗೆ ಸಲ್ಲಿಕೆ ಮಾಡಿದೆ.
ಈ ನಡುವೆ 10 ಆರೋಪಿಗಳ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಜಾಮೀನು ಅರ್ಜಿ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಇನ್ನು ಆರೋಪಿಗಳ ಜೈಲು ವಾಸ ಅಂತ್ಯವಾಗುತ್ತಾ..? ಅಥವಾ ಕಂಟಿನ್ಯೂ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ಎಡಿಜಿಪಿ ಅಮೃತ್ ಪೌಲ್, Dysp ಶಾಂತಕುಮಾರ್ ಸೇರಿದಂತೆ ಒಟ್ಟು 10 ಆರೋಪಿಗಳು ಜಾಮೀನು ಅರ್ಜಿಯನ್ನ ಸಲ್ಲಿಸಿದ್ದಾರೆ. ಅರ್ಜಿಯನ್ನ ತಿರಸ್ಕರಿಸುವಂತೆ ಈಗಾಗ್ಲೇ ಸಿಐಡಿ ಅಧಿಕಾರಿಗಳು ಸಾಕಷ್ಟು ಪ್ರಿಪರೇಷನ್ ಮಾಡಿಕೊಂಡಿದ್ದಾರೆ. ಆರೋಪಿಗಳು ಒಂದು ವೇಳೆ ಜಾಮೀನಿನ ಮೂಲಕ ಹೊರಬಂದ್ರೆ ಸಾಕ್ಷಿಗಳನ್ನ ನಾಶಮಾಡುವ ಸಾಧ್ಯತೆ ಹೆಚ್ಚಿದೆ. ಇದೇ ವಿಚಾರವನ್ನ ಕೋರ್ಟ್ ಮುಂದೆ ಪ್ರೆಸೆಂಟ್ ಮಾಡುವ ಕೆಲಸವನ್ನ ಸಿಐಡಿ ಮಾಡಲಿದೆ. ಒಂದು ವೇಳೆ ಆರೋಪಿಗಳ ಪರ ಜಾಮೀನು ಅರ್ಜಿ ಮಂಜೂರಾದ್ರೆ ಕೆಲ ಕಂಡೀಷನ್ಗಳನ್ನ ಕೋರ್ಟ್ ಹೇರುವಂತಹ ಕೆಲಸವನ್ನ ಮಾಡುತ್ತೆ. ತನಿಖಾಧಿಕಾರಿಗಳು ತನಿಖೆಗೆ ಕರೆದಾಗ ತಪ್ಪದೇ ಹಾಜರಾಗಬೇಕು. ಬೆಂಗಳೂರನ್ನ ಬಿಟ್ಟು ಹೋಗದಂತೆ ಕೆಲ ಷರತ್ತುಗಳನ್ನ ಹಾಕಬಹುದು.
ಇಷ್ಟು ದಿನ ಜೈಲು ಕಂಬಿ ಎಣಿಸುತ್ತಾ ಕೊರಗ್ತಿದ್ದ ಎಡಿಜಿಪಿ ಅಮೃತ್ ಪೌಲ್ ನಿಜಕ್ಕೂ ಹೈರಾಣಾಗಿ ಹೋಗಿದ್ದಾರಂತೆ. ಗುರುವಾರ ಅಮೃತ್ ಪೌಲ್ ಟೀಂಗೆ ಜಾಮೀನು ಅರ್ಜಿ ವರವಾಗುತ್ತಾ ಅಥವಾ ವಿಷವಾಗುತ್ತಾ ಅನ್ನೋದನ್ನ ಕಾದ ನೋಡಬೇಕು.
ಅಶ್ವಥ್.ಎಸ್.ಎನ್, ಕ್ರೈಂ ಬ್ಯೂರೋ, ಪವರ್ ಟಿವಿ