Wednesday, January 22, 2025

ಪಾಕಿಸ್ತಾನ ಓಪನರ್​​ ರಿಜ್ವಾನ್ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್​

ನವದೆಹಲಿ: ಟೀಂ ಇಂಡಿಯಾ ನಾಲ್ಕನೇ ಕ್ರಮಂಕದಲ್ಲಿಳಿದು ಸ್ಪೋಟಕ ಬ್ಯಾಟಿಂಗ್​ ಮಾಡುವ ಭರವಸೆಯ ಕ್ರಿಕೆಟರ್​ ಸೂರ್ಯಕುಮಾರ್​ ಯಾದವ್​ ದಾಖಲೆಯೊಂದನ್ನ ನಿರ್ಮಿಸಿದ್ದಾರೆ.

ಈ ವರ್ಷದ ಟಿ-20 ಪಂದ್ಯಗಳಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಸೂರ್ಯಕುಮಾರ್​ ಯಾದವ್​ ಪಾಕಿಸ್ತಾನ ಆಟಗಾರ ಮೊಹಮ್ಮದ್​ ರಿಜ್ವಾನ್ ದಾಖಲೆಯನ್ನ ಉಡೀಸ್​ ಮಾಡಿದ್ದಾರೆ.

ಇಂದು ನೆದರ್ಲ್ಯಾಂಡ್ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ ಸೂರ್ಯಕುಮಾರ್​ ಯಾದವ್​ 51 ರನ್ ಗಳಿಸಿದ್ದ ಅಜೇಯರಾಗಿ ಉಳಿದಿದ್ದರು. ಈ ಮೂಲಕ 2022 ನೇ ವರ್ಷದ T-20 ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯಸ್ಸಿಗೆ ಯಾದವ್​​ ಪಾತ್ರರಾಗಿದ್ದಾರೆ.

ಸೂರ್ಯಕುಮಾರ್​ ಯಾದವ್​ ಈವರೆಗೆ 25 ಟಿ-20 ಪಂದ್ಯಗಳಲ್ಲಿ 867 ರನ್ ಗಳಿಸಿದ್ದಾರೆ. ಪಾಕಿಸ್ತಾನ ತಂಡದ ಓಪನರ್ ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಸೂರ್ಯ ಹಿಂದಿಕ್ಕಿದ್ದಾರೆ. ಈ ವರ್ಷದ ಟಿ-20 ಪಂದ್ಯಗಳಲ್ಲಿ ಮೊಹಮ್ಮದ್ ರಿಜ್ವಾನ್ 19 ಪಂದ್ಯಗಳಲ್ಲಿ 825 ರನ್​ ಕಲೆಹಾಕಿ ಮೊದಲನೇ ಸ್ಥಾನದಲ್ಲಿ ಇದ್ದರು. ಸದ್ಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಿಜ್ವಾನ್​ 14 ರನ್​ ಕಳಿಸಿ ಔಟ್​ ಆಗಿದ್ದು, ಈ ಮೂಲಕ ಒಟ್ಟು 20 ಟಿ-20 ಪಂದ್ಯಗಳಲ್ಲಿ 839 ರನ್​ ಗಳಿಸಿ ಎರಡನೇ ಸ್ಥಾನದಲ್ಲಿ ರಿಜ್ವಾನ್​ ಉಳಿದಿದ್ದಾರೆ.

RELATED ARTICLES

Related Articles

TRENDING ARTICLES