Wednesday, January 22, 2025

ನೆದರ್ಲೆಂಡ್ಸ್ ವಿರುದ್ಧ ಭಾರತಕ್ಕೆ ಸುಲಭ ಜಯ

ಆಸ್ಟ್ರೇಲಿಯಾ: ಟಿ-20 ವಿಶ್ವಕಪ್​ನ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಭಾರತ ತಂಡ 56 ರನ್​ಗಳ ಹಂತರದಿಂದ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾದಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ-20 ಸೂಪರ್​ 12 ಹಂತದ ಗ್ರೂಪ್​ ಬಿ ಟಿ-20 ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ಸ್​​ ತಂಡವನ್ನ ಬಗ್ಗುಬಡಿದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್​ ಕಲೆಹಾಕಿತು. ಭಾರತ ಪರ ರೋಹಿತ್​ ಶರ್ಮಾ 53 ರನ್​ ಹೊಡೆದು ಔಟ್​ ಆದರೆ, ವಿರಾಟ್​ ಕೊಹ್ಲಿ 62, ಸೂರ್ಯ ಕುಮಾರ್​ ಯಾದವ್​ 51 ರನ್​ ಹೊಡೆದು ಅಜೇಯರಾಗಿ ಉಳಿದರು.

180 ರನ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 123 ರ್​ ಕಲೆಹಾಕುವಲ್ಲಿ ಸಶಕ್ತವಾಯಿತು. ಈ ಮೂಲಕ ಭಾರತ ತಂಡ 56 ರನ್​ಗಳಿಂದ ಜಯಗಳಿಸಿತು.

ಭುವನೇಶ್ವರ್​ ಕುಮಾರ್​ 2, ಅರ್ಷದೀಪ್ ಸಿಂಗ್​ 2, ಅಕ್ಸರ್​ ಪಟೇಲ್​ 2, ರವಿಚಂದ್ರನ್ ಅಶ್ವೀನ್​ 2, ಮೊಹಮ್ಮದ್​ ಶಮಿ 1 ವಿಕೆಟ್​ ಪಡೆದು ಮಿಂಚಿದರು. ಈ ಮೂಲಕ ಭಾರತ ತಂಡ ಗ್ರೂಪ್​ ಬಿ ಹಂತದ ಟೀಮ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು.

RELATED ARTICLES

Related Articles

TRENDING ARTICLES