Monday, December 23, 2024

ಪಾಕಿಸ್ತಾನಕ್ಕೆ ಭಾರೀ ಮುಖಭಂಗ; ಜಿಂಬಾಬ್ವೆಗೆ ಗೆಲುವು

ಆಸ್ಟ್ರೇಲಿಯಾ: ವಿಶ್ವಕಪ್​ನ ಟಿ-20 ಪಂದ್ಯದಲ್ಲಿ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಭಾರೀ ಮುಖಭಂಗವಾಗಿದೆ.

ಇಂದು ಆಸ್ಟ್ರೇಲಿಯಾದ ಪರ್ತ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ತಂಡ 1 ರನ್​ಗಳ ಅಂತರದಿಂದ ಜಯಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 130 ರನ್​ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 129 ರನ್​ ಕೆಲಹಾಕಿತು. ಈ ಮೂಲಕ ಜಿಂಬಾಬ್ವೆ ತಂಡ 1 ರನ್​ಗಳ ಅಂತರದಿಂದ ಜಯಗಳಿಸಿತು.

ವಿಶ್ವಕಪ್​ನ ಮೊದಲ ಟಿ-20 ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿತ್ತು. ಈಗ ಎರಡನೇ ಟಿ-20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಸೋಲು ಕಂಡಿದ್ದು, ಈ ಮೂಲಕ ಪಾಕಿಸ್ತಾನ ಕಂಡ ಕನಸು ಸಮಿಫೈನಲ್​ ಹಾದಿ ದುರ್ಗಮವಾಗಿದೆ.

RELATED ARTICLES

Related Articles

TRENDING ARTICLES