ಹಾಸನ: ವರ್ಷಕ್ಕೊಮ್ಮೆ ಭಕ್ತಾಧಿಗಳಿಗೆ ದರ್ಶನ ನೀಡುವ ಹಾಸನಾಂಬ ದೇವಿ ನಂಬಿ ಬಂದ ಭಕ್ತಾಧಿಗಳ ಸಂಕಷ್ಟವನ್ನು ಬಗೆಯರಿಸಿ, ಎಲ್ಲೆಡೆ ಸಾಕಷ್ಟು ಹೆಸರು ಮಾಡಿದೆ.
ಹಾಸನಾಂಬೆ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12.47 ಕ್ಕೆ, ಗರ್ಭಗುಡಿಯ ಬಾಗಿಲು ಕ್ಲೋಸ್ ಆಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಸ್ಥಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಡಿಸಿ ಅರ್ಚನಾ, ಎಸ್ಪಿ ಹರಿರಾಮ್ ಶಂಕರ್ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಗಿದ್ದು, ಬಂದಿದ್ದಂತಹ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿ ಬಾಗಿಲನ್ನು ಕ್ಲೋಸ್ ಮಾಡಲಾಗಿದೆ.
ದೇವಸ್ಥಾನ ಬಾಗಿಲನ್ನು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದ ಪುರೋಹಿತರು ಬಾಗಿಲನ್ನು ಮುಚ್ಚಿದ್ದಾರೆ. ಇನ್ನು ಹಾಸನಾಂಬ ತಾಯಿಯ ದರ್ಶನಕ್ಕೆ ಇನ್ನೊಂದು ವರ್ಷ ಕಾಯಬೇಕಾಗಿದೆ. ಈ ಭಾರಿ 15 ದಿನಗಳ ಕಾಲ ದರ್ಶನ ನೀಡಿದ ಹಾಸನಾಂಬೆ ತಾಯಿ, ಅಕ್ಟೋಬರ್ 13 ರಿಂದ 27 ರ ವರೆಗೆ ಜಾತ್ರಾ ಮಹೋತ್ಸವ ನಿರ್ವಿಗ್ನವಾಗಿ ನೆರವೇರಿದೆ.