Monday, December 23, 2024

ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪುಸ್ತಕ ರಾಜ್ಯದಲ್ಲಿ ಬಿಡುಗಡೆ; ಎಲ್ಲೆಡೆ ವಿರೋಧ

ಬೆಂಗಳೂರು: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತು ಇಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಹಿನ್ನಲೆಯಲ್ಲಿ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ ಬದುಕು ಮತ್ತು ಸಾಧನೆ ಬಗ್ಗೆ ಪುಸ್ತಕವನ್ನ ಲೇಖಕ ಸುಧಾಕರ್ ಎಸ್.ಬಿ ಬರೆದಿದ್ದಾರೆ. ಇಂದು ಮಲ್ಲತಳ್ಳಿಯ ಕಲಾಗ್ರಾಮದಲ್ಲಿ ಸಂಜೆ 5 ಗಂಟೆಗೆ ಬಿಡುಗಡೆ ಆಗಲಿದೆ.

ಈ ಪುಸ್ತಕವನ್ನು ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್, ನಿವೃತ್ತ ನ್ಯಾಯಾಧೀಶರು ಉದ್ಘಾಟನೆ ಮಾಡಲಿದ್ದಾರೆ. ಆದ್ರೆ ಈಗ ಈ ಪುಸ್ತಕ ಬಿಡುಗಡೆಗೆ ಮುನ್ನವೇ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.

ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯ ಮೂಲಕ 40 ಸೈನಿಕರ ಹತ್ಯೆ ಮಾಡಿದ ಶತ್ರು ದೇಶ ಪಾಕಿಸ್ತಾನ. ಆ ದೇಶದ ಪ್ರಧಾನಿಯ ವೈಭವಿಕರಣ ಸಹಿಸಲ್ಲ. ಇದಕ್ಕೆ ಅನುಮತಿ ರದ್ದು ಮಾಡಲು ಹಿಂದೂ ಜನ ಜಾಗೃತಿ ಸಮಿತಿಯಿಂದ ಆಗ್ರಹ ಮಾಡಿದೆ.

RELATED ARTICLES

Related Articles

TRENDING ARTICLES