ಬೆಂಗಳೂರು: ದೀಪಾವಳಿ ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಆದರೆ ಹಬ್ಬದ ಪರಿಣಾಮವಾಗಿ ಸಿಲಿಕಾನ್ ಸಿಟಿ ಅಕ್ಷರಶಃ ವಾಯುಮಾಲಿನ್ಯದಿಂದ ಅಕ್ಷರಶಃ ನಲುಗಿ ಹೋಗಿದೆ.
ಈ ಭಾರಿ ದೀಪಾವಳಿ ಹಬ್ಬಕ್ಕೆ ಕೇವಲ ಗ್ರೀನ್ ಪಟಾಕಿಗೆ ಮಾತ್ರ ಅನುಮತಿ ಕೊಟ್ಟಿದ್ದರು ಸಹ, ತಗ್ಗದ ವಾಯು ಮಾಲಿನ್ಯದಿಂದಾಗಿ ಎಲ್ಲರು ಚಿಂತೆ ಪಡುವಂತಾಗಿದೆ.
3 ದಿನದ ಪಟಾಕಿ ಹಾವಳಿಯಿಂದ ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಹೇರಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಮೂಲಕ ದೀಪಾವಳಿಯ ಪಟಾಕಿ ಇಡೀ ಬೆಂಗಳೂರಿಗೆ ಕಂಟಕವಾಯ್ತು ಎಂಬ ಪ್ರಶ್ನೆ ಉದ್ಬವವಾಗಿದೆ. ಇನ್ನು ದೆಹಲಿಯಂತೆ ಬೆಂಗಳೂರಿನಲ್ಲಿಯು ಸಹ ಪಟಾಕಿಯಿಂದ ತಲ್ಲಣವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿಯಿಂದ ರಕ್ಕಸ ಹೊಗೆಯ ಅಬ್ಬರ ಜೋರಾಗಿದ್ದು, ದೀಪಾವಳಿ ಪಟಾಕಿಯಿಂದ, ಗಾಳಿಯಲ್ಲಿ ಹೆಚ್ಚಾದ ಮಾಲಿನ್ಯಕಾರಕ ಕಣಗಳಿಂದ ನಗರದ ಸಾಕಷ್ಟು ಜನರ ಆರೋಗ್ಯದಲ್ಲಿ ಏರು-ಪೇರಾಗಿದೆ. ನಗರದ ಸಿಲ್ಕ್ ಬೋರ್ಡ್, ಸಿಟಿ ರೈಲ್ವೆ ನಿಲ್ದಾಣ, ಜಯನಗರ ಸುತ್ತಮುತ್ತ ವಾಯು ಗುಣಮಟ್ಟ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಮಾಲಿನ್ಯಕಾರಕ ಪಟಾಕಿಗೆ ನಿಷೇಧ ಹೇರಿದ್ದರು, ಅನೇಕ ಕಡೆಗಳಲ್ಲಿ ಹಸಿರು ಪಟಾಕಿ ಜೊತೆ ಎಲ್ಲಾ ಪಟಾಕಿ ಸ್ಪೋಟ ಮಾಡಿರುವುದು ಬೆಳಕಿಗೆಬಂದಿದೆ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿಗೆ ಅವಕಾಶ ನೀಡಿದ್ದರೂ, ಅವಧಿ ಮೀರಿ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ 3 ದಿನಗಳಲ್ಲಿ ನಗರದ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ.