Monday, December 23, 2024

ಬೆಳಕಿನ ಹಬ್ಬ ಹಲವರ ಬಾಳಾಯ್ತು ಕತ್ತಲು..!

ಬೆಂಗಳೂರು : ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಿ ಅಂತಾ ಎಷ್ಟೇ ಅರಿವು ಮೂಡಿಸಿದ್ರೂ, ಪಟಾಕಿಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯೂ ಕೂಡ ಬೆಳಕಿನ ಹಬ್ಬ ದೀಪಾವಳಿ ವೇಳೆ ಸಾಕಷ್ಟು ಮಕ್ಕಳ ಬದುಕು ಕತ್ತಲಾಗಿದೆ‌. ನಗರದಲ್ಲಿ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಕಳೆದ ಮೂರು ದಿನದಿಂದ 80 ಹೆಚ್ಚು ಕೇಸ್​ಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಇದ್ರಲ್ಲಿ ಹಲವು ಗಂಭೀರ ಪ್ರಕರಣಗಳು ಆಗಿದ್ದು, ಕೆಲವರು ದೃಷ್ಠಿಯನ್ನೇ ಕಳೆದುಕೊಂಡಿದ್ದಾರೆ.

ಪಟಾಕಿ ಬಗ್ಗೆ ಸರ್ಕಾರ ಹಾಗೂ ವೈದ್ಯರು ಎಷ್ಟೇ ಜಾಗೃತಿ ಮೂಡಿಸಿದರೂ, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗ್ತಿವೆ‌.. ನಗರ ಮಿಂಟೋ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಅಧಿಕ ಪ್ರಕರಣಗಳು ವರದಿಯಾಗಿವೆ.. ಹಲವು ಬಾಲಕರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕತ್ತಲಾಯ್ತು ಬೆಳಕಿನ ಹಬ್ಬ..!

ಮಿಂಟೋ ಕಣ್ಣಿನ ಆಸ್ಪತ್ರೆ – 20
ನಾರಾಯಣ ನೇತ್ರಾಲಯ – 20
ನೇತ್ರಧಾಮ ಕಣ್ಣಿನ ಆಸ್ಪತ್ರೆ – 23
ಶಂಕರ ಕಣ್ಣಿನ ಆಸ್ಪತ್ರೆ – 13
ಮೋದಿ ಕಣ್ಣಿನ ಆಸ್ಪತ್ರೆ – 02

ಒಟ್ಟಾರೆ ದೀಪಾವಳಿ ಹಬ್ಬ ಬೆಳಕಿನಿಂದ ಕತ್ತಲೆಗೆ ಹೋಗಬಾರದು. ಹೀಗಾಗಿ ಪಟಾಕಿ ಹಚ್ಚುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕೆಲವು ಅಪಾಯಕಾರಿ ಪಟಾಕಿಗಳಿಂದ ದೂರವಿರಬೇಕಾಗಿದೆ.

ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು

RELATED ARTICLES

Related Articles

TRENDING ARTICLES