Monday, December 23, 2024

ಪಟಾಕಿ ಹಚ್ಚಿ ಪುಂಡರ ಅಟ್ಟಹಾಸ..!

ಬೆಂಗಳೂರು : ಅಯ್ಯೋ ಬಿಡ್ರಪ್ಪ ಪಟಾಕಿ ಹೊಡಿಬೇಡಿ. ದಮ್ಮಯ್ಯ ಅಂತ ಅಂಗಲಾಚಿದ್ರೂ ಆ ಪುಂಡರು ಮಾತೇ ಕೇಳ್ತಿರ್ಲಿಲ್ಲ. ಸಿಕ್ಕ ಸಿಕ್ಕವರಿಗೆ ಪಟಾಕಿ ಹಚ್ಚಿ ಹೆದರಿಸುತ್ತಿದ್ದರು. ಈ ಪುಂಡರ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಪಟಾಕಿ ಮ್ಯಾಟರ್ ನಡೆದಿರೋದು ಮಂಗಳವಾರ ರಾತ್ರಿ. ಅದು ಬೆಂಗಳೂರಿನ ಜ್ಞಾನಭಾರತಿಯ ಮಾರುತಿ ನಗರದಲ್ಲಿ. ಪುಂಡರ ಗುಂಪೊಂದು ರಸ್ತೆಯಲ್ಲಿ ನಡೆದೋಗೋ ವ್ಯಕ್ತಿಗಳನ್ನ ಗುರಿಯಾಗಿಸಿ ಪಟಾಗಿ ಹಚ್ಚಿ ಮೈಮೇಲೆ ಎಸೆಯುವಂತಹ ಕೆಲಸವನ್ನ ಮಾಡ್ತಿದ್ರು.

ಹೀಗೆ ಪಟಾಕಿ ಹಿಡಿದು ಕಿರಿಕ್ ತೆಗೆಯುತ್ತಿದ್ದ ಪುಂಡರನ್ನ ಮಹದೇವಸ್ವಾಮಿ ಅನ್ನೋರು ಪ್ರಶ್ನಿಸ್ತಾರೆ. ಯಾಕೆ ಸಾರ್ವಜನಿಕ ಸ್ಥಳಗಳಲ್ಲಿ ನ್ಯೂಸೆನ್ಸ್ ಕ್ರಿಯೇಟ್ ಮಾಡ್ತಿದ್ದೀರಿ..? ನಿಮಗೆ ಅಕ್ಕ ತಂಗಿಯರಿಲ್ವಾ..? ಇದ್ರೆ ಈ ರೀತಿ ಮಾಡ್ತೀರಾ..? ಅಂತ ಏರು ಧ್ವನಿಯಲ್ಲೇ ಮಹದೇವಸ್ವಾಮಿ ಕೇಳ್ತಾರೆ.. ಅಷ್ಟಕ್ಕೆ ಪಿತ್ತ ನೆತ್ತಗೇರಿಸಿಕೊಂಡ ಪುಂಡರು ಪಕ್ಕದಲ್ಲೇ ಇದ್ದ ಟೊಮ್ಯಾಟೋ ಟ್ರೇ, ಮೊಟ್ಟೆ ಟ್ರೇ ಹಿಡಿದು ಮಹದೇವಸ್ವಾಮಿಯವರಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಪುಂಡರ ಪುಂಡಾಟಿಕೆ ಸಿಸಿಟಿವಿಯಲ್ಲೂ ಕೂಡ ಸೆರೆಯಾಗಿತ್ತು.

ಪುಂಡರ ಪುಂಡಾಟಿಕೆಯಿಂದ ಹೆದರಿದ ಮಹದೇವಸ್ವಾಮಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ಪುಂಡಾಟಿಕೆ ಮೆರೆದ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ.

RELATED ARTICLES

Related Articles

TRENDING ARTICLES