Monday, December 23, 2024

ಕಾಂತಾರ ವಿರುದ್ಧ ಕಾನೂನು ಸಮರ.. ಸಂಕಷ್ಠದಲ್ಲಿ ರಿಷಬ್​​​​​​

ವಿಶ್ವ ಮೆಚ್ಚಿದ ಕಾಂತಾರ ಚಿತ್ರಕ್ಕೆ ಒಂದು ಕಡೆ ಆಸ್ಕರ್​​ ಲೆವೆಲ್​ಗೆ ಚರ್ಚೆಗಳು ನಡಿತಿವೆ. ಇನ್ನೊಂದು ಕಡೆ ಆರೋಪ, ಅಪವಾದಗಳ ಸಂಕಷ್ಟವೂ ಎದುರಾಗಿದೆ. ಯೆಸ್​​​.. ನಟ ಚೇತನ್​ ಸೋಶಿಯಲ್​ ಮೀಡಿಯಾದಲ್ಲಿ ಕಾಂತಾರ ವಿರುದ್ದ ಸದ್ದು ಮಾಡ್ತಿದೆ. ಈ ವಿವಾದದ ನಡುವೆ ಮತ್ತೊಂದು ಆರೋಪ ಕೇಳಿ ಬರ್ತಿದೆ. ಹಾಗಾದ್ರೇ ರಿಷಬ್​​ ವಿರುದ್ಧ ಕೇಳಿ ಬರ್ತಿರೋ ಅಪವಾದವೇನು ಅಂತೀರಾ..? ನೀವೇ ಓದಿ.

  • ‘ವರಾಹ ರೂಪಂ’ ಕದ್ದ ಹಾಡು.. ಬ್ರಿಗೇಡ್​​ ಸಂಸ್ಥೆ ಆರೋಪ

ವರ್ಲ್ಡ್​ ವೈಡ್​ ಬಾಕ್ಸ್​ ಆಫೀಸ್​ ಉಡೀಸ್​ ಮಾಡಿದ ಸಿನಿಮಾ ಕಾಂತಾರ. ಕರ್ನಾಟಕದಲ್ಲಿ ಹೊಂಬಾಳೆ ಬ್ಯಾನರ್​​ ಅಡಿಯ ಹಳೆ ದಾಖಲೆಗಳನ್ನು ಪುಡಿ ಮಾಡಿದ ಕರಾವಳಿ ಕಾಡಿನ ಕಥೆ. ಕರುನಾಡಿನಲ್ಲಿ ಬರೋಬ್ಬರಿ 77 ಲಕ್ಷಕ್ಕೂ ಅಧಿಕ ಮಂದಿ ಸಿನಿಮಾ ವೀಕ್ಷಣೆ ಮಾಡಿದ ಅದ್ಭುತ ಕಥೆ. ಭೂತಕೋಲ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳ ನಡುವೆ ಮಾನವ ಮತ್ತು ಪ್ರಕೃತಿಯ ಸಂಬಧಗಳನ್ನು ಮನಮುಟ್ಟುವಂತೆ ತೋರಿಸಿದ ಸಿನಿಮಾ ಕಾಂತಾರ.

ಪರಭಾಷೆಯ ಸೂಪರ್​ ಸ್ಟಾರ್​ಗಳ ಬಾಯಲ್ಲೂ ಕಾಂತಾರ ಚಿತ್ರಕ್ಕೆ ಶಹಬ್ಬಾಸ್​​ಗಿರಿ. ವಿದೇಶಗಳಲ್ಲೂ ಕಾಂತಾರ ಚಿತ್ರಕ್ಕೆ ಜೈಕಾರ. ಜನಮೆಚ್ಚಿದ ಅದ್ಧೂರಿ ಚಿತ್ರ ಕಾಂತಾರ ವಿವಾದಗಳಿಂದಲೂ ಸುದ್ದಿಯಾಗ್ತಿದೆ. ಒಂದಿಲ್ಲೊಂದು ಆರೋಪಗಳಿಂದ ಸಂಕಷ್ಠಕ್ಕೀಡಾಗಿದೆ. ಯೆಸ್​​. ಇತ್ತೀಚೆಗೆ ನಟ ಚೇತನ್​ ಆರೋಪ ಮಾಸುವ ಮುನ್ನವೇ, ಕೇರಳದ ತೈಕುಡಂ ಬ್ರಿಗೇಡ್​ ಸಂಸ್ಥೆ ವರಾಹ ರೂಪಂ ಹಾಡನ್ನು ಕದಿಯಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.

  • ವರಾಹ ರೂಪಂ V/S ನವರಸಂ.. ಗೆಲ್ಲೋದ್ಯಾರು..?
  • ಕಾಂತಾರ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾದ ಸಂಸ್ಥೆ..!

ಕಾಂತಾರ ಕ್ಲೈಮ್ಯಾಕ್ಸ್​​ಗೆ ಬೆಚ್ಚಿದ ಪ್ರೇಕ್ಷಕರು ಸಿನಿಮಾವನ್ನು ರಿಪೀಟ್​ ಮೋಡ್​​ನಲ್ಲಿ ನೋಡ್ತಿದ್ದಾರೆ. ಮೌತ್​ ಟು ಮೌತ್​ ಪ್ರಚಾರ ಗಿಟ್ಟಿಸಿಕೊಂಡ ಕಾಂತಾರ ಪರಭಾಷೆಗಳಿಗೂ ಡಬ್​ ಆಗಿ ಧೂಳೆಬ್ಬಿಸ್ತಿದೆ. ಈ ನಡುವೆ ಚಿತ್ರದಲ್ಲಿನ ವರಾಹ ರೂಪಂ ಹಾಡನ್ನು ಮಲಯಾಳಂನ ನವರಸಂ ಅಲ್ಬಂ ಸಾಂಗ್​​ನಿಂದ ಕದಿಯಲಾಗಿದೆಯಂತೆ.

ಕಾಂತಾರ ಚಿತ್ರತಂಡ ಆಡಿಯೋ ಕಾಪಿರೈಟ್ಸ್​​ ಉಲ್ಲಂಘನೆ ಮಾಡಲಾಗಿದೆ. ನಾವು ಕಾಂತಾರ ಚಿತ್ರತಂಡದ ವಿರುದ್ದ ಕಾನೂನು ಸಮರಕ್ಕೆ ಸಿದ್ಧ ಎಂದು ಕೇರಳದ ತೈಕುಡಂ ಬ್ರಿಗೇಡ್​ ಸಂಸ್ಥೆ ಆರೋಪ ಮಾಡಿದೆ. ಐದು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ನವರಸಂ ಅಲ್ಬಂ ಸಾಂಗ್​ಗೂ, ಕಾಂತಾರ ವರಾಹ ರೂಪಂ ಹಾಡಿಗೂ ಬಹುತೇಕ ಸಾಮ್ಯತೆ ಇದೆ ಎಂದು ಆರೋಪದಲ್ಲಿ ತಿಳಿಸಿದೆ.

ಕಾಂತಾರ ಚಿತ್ರದ ಸಕ್ಸಸ್​​ ಹಿಂದೆ ವರಾಹ ರೂಪಂ ಹಾಡಿನ ಪ್ರಭಾವ ದೊಡ್ಡದು. ಈ ನಡುವೆ ಈ ಹಾಡಿನ ವಿರುದ್ಧವೇ ಈ ಆರೋಪ ಕೇಳಿ ಬಂದಿರೋದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಎನಿವೇ, ಈ ವಿಚಾರವಾಗಿ ಹೊಂಬಾಳೆ ಅಂಡ್​​ ಟೀಮ್​​ ರಿಯಾಕ್ಷನ್​ ಏನು ಅನ್ನೋದನ್ನು ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES