Thursday, December 26, 2024

ಹಿಂದು ಸಮಾಜ ತಿರುಗಿ ಬಿದ್ದರೆ ಮುಸ್ಲಿಂ ಗೂಂಡಾಗಳು ಉಳಿಯುವುದಿಲ್ಲ : ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ : ಹಿಂದು ಯುವಕರ ಕಗ್ಗೊಲೆ ಮಾಡುವವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿವೆ. ರಾಜ್ಯ ಹಾಗೂ ದೇಶದಲ್ಲಿ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿಗಳ ಬಂಧಿಸುತ್ತಿದ್ದಾರೆ. ಈ ರೀತಿ ಮಚ್ಚು ಲಾಂಗ್ ಹಿಡಿದು ದಾಂಧಲೆ ಮಾಡುವುದು. ಹಿಂದು ಯುವಕರ ಕಗ್ಗೊಲೆ ಮಾಡುವವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಅದಲ್ಲದೇ, ಮಚ್ಚು ಲಾಂಗ್ ಹಿಡಿದು ದಾಳಿ ನಡೆಸುವವರನ್ನು ನೇಣಿಗೆ ಹಾಕಬೇಕು. ಇಲ್ಲದಿದ್ದರೆ ಗುಂಡಿಟ್ಟು ಹೊಡೆಯಬೇಕು. ಹಾಗಾದಾಗ ಮಾತ್ರ ಆರೋಪಿಗಳಿಗೆ ಭಯ ಬರುತ್ತದೆ. ಇಲ್ಲದಿದ್ದರೆ ಇಂತಹ ಘಟನೆ ಮರುಕಳಿಸುತ್ತಲೇ ಇರುತ್ತವೆ. ಇಂತಹ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ನೂತನ ಕಾನೂನು ಜಾರಿಯಾಗಬೇಕು. ನೂತನ ಕಾನೂನು ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಇನ್ನು, ಹಿಂದು ಸಮಾಜ‌ ಶಾಂತಿಯುತವಾಗಿದೆ. ಮುಸ್ಲಿಂ ಗೂಂಡಾಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಹಿಂದು ಸಮಾಜ ತಿರುಗಿ ಬಿದ್ದರೆ ಮುಸ್ಲಿಂ ಗೂಂಡಾಗಳು ಯಾರು ಉಳಿಯುವುದಿಲ್ಲ. ಮುಸ್ಲಿಂ ಗೂಂಡಾಗಳಿಗೆ ಅವರ ಹಿರಿಯರು ಬುದ್ದಿ ಹೇಳಬೇಕು. ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ವ್ಯಾಪಾರ ವಹಿವಾಟಿಗೆ ಯಾವುದೇ ತೊಂದರೆ ಆಗಿಲ್ಲ. ಪೊಲೀಸರು ನಗರದ ಎಲ್ಲೆಡೆ ಪಥ ಸಂಚಲನ ನಡೆಸಿ, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದರು.

RELATED ARTICLES

Related Articles

TRENDING ARTICLES