Friday, November 22, 2024

ಉಪ್ಪಿ, ಶಿವಣ್ಣ ಹಿಟ್ ಕಾಂಬಿನೇಷನ್​ಗೆ ರಾಜ್ ಬಿ ಶೆಟ್ಟಿ ಸಾಥ್

ಗಾಳಿಪಟ 2 ಚಿತ್ರದ ನಂತ್ರ ಆಕಾಶದೆತ್ತರಕ್ಕೆ ಮತ್ತೊಮ್ಮೆ ಗಾಳಿಪಟ ಹಾರಿಸೋಕೆ ನಿರ್ಮಾಪಕ ರಮೇಶ್​ ರೆಡ್ಡಿ ಸಜ್ಜಾಗಿದ್ದಾರೆ. ಈ ಬಾರಿ ಸಿನಿಮಾಂತ್ರಿಕ ಅರ್ಜುನ್​​​ ಜನ್ಯಾ ಕೈಗೆ ಜವಾಬ್ದಾರಿ ನೀಡಿದ್ದು, ರಿಯಲ್​ ಸ್ಟಾರ್​​ ಉಪ್ಪಿ, ಹ್ಯಾಟ್ರಿಕ್​ ಹೀರೋ ಶಿವಣ್ಣ ಒಂದೇ ಸ್ಕ್ರೀನ್​​​​​​ನಲ್ಲಿ ಮಿಂಚಲಿದ್ದಾರೆ. ಇದ್ರ ಜತೆಗೆ ಮತ್ತೊಬ್ಬ ಸ್ಟಾರ್​​ ನಟನ ಎಂಟ್ರಿ ಆಗಿದ್ದು ಸಖತ್​ ಹೈಪ್​ ಕ್ರಿಯೇಟ್​ ಮಾಡಿದೆ. ಯಾರು ಆ ಸ್ಟಾರ್​ ಕಲಾವಿದ ಅಂತೀರಾ..? ನೀವೇ ಓದಿ.

  • ತ್ರಿಮೂರ್ತಿಗಳ ದರ್ಬಾರ್​​​​​​.. ಮಾಸ್​​ ಐಕಾನ್​​ ಸ್ಪೆಷಲ್​ ರೋಲ್

ಕನ್ನಡ ಚಿತ್ರರಂಗದಲ್ಲಿ ಗಾಳಿಪಟ 2 ಸಿನಿಮಾ ಮಾಡಿದ ಕಮಾಲ್​ ಎಲ್ರಿಗೂ ಗೊತ್ತಿದೆ. ನಿರ್ಮಾಪಕ ರಮೇಶ್​ ರೆಡ್ಡಿ ಕನಸಿನ ಸಿನಿಮಾವಾಗಿದ್ದ ಗಾಳಿಪಟ 2 ನಿರೀಕ್ಷೆಗೂ ಮೀರಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯಿತು.​​​​​ ಈ ಚಿತ್ರದ ನಂತ್ರ ಪ್ಯಾನ್​ ಇಂಡಿಯಾ ಚಿತ್ರಕ್ಕೆ ಕೈ ಹಾಕಿದ ಸ್ಟಾರ್​ ಪ್ರೋಡ್ಯೂಸರ್​​​ ಅರ್ಜುನ್​ ಜನ್ಯಾಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ. ಜತೆಗೆ ಉಪ್ಪಿ, ಶಿವಣ್ಣ ಕಾಂಬೋದಲ್ಲಿ ಸಖತ್​​ ಹೈಪ್​ ಕ್ರಿಯೇಟ್​ ಮಾಡಿದ್ದ 45 ಚಿತ್ರತಂಡಕ್ಕೆ ರಾಜ್​ ಬಿ ಶೆಟ್ಟಿ ಸ್ಪೆಷಲ್​​ ರೋಲ್​​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ಯೆಸ್​​.. ಮ್ಯೂಸಿಕ್​ ಮಾಂತ್ರಿಕ ಅರ್ಜುನ್ ಜನ್ಯಾ  ಮೊದಲ ಬಾರಿಗೆ ಆ್ಯಕ್ಷನ್​ ಕಟ್​​ ಹೇಳೋಕೆ ಸಜ್ಜಾಗಿದ್ದಾರೆ. ಅದ್ಧೂರಿ ಕಥೆಯೊಂದಿಗೆ ಬಿಗ್​ ಸ್ಟಾರ್​ ಕಾಸ್ಟಿಂಗ್​​ನಲ್ಲಿ ಸಿನಿಮಾ ಮೂಡಿ ಬರ್ತಿದೆ. ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಅಬ್ಬರಿಸೋಕೆ ಸಜ್ಜಾಗಿರೋ 45 ಸಿನಿಮಾದಲ್ಲಿ ಮನರಂಜನೆಯ ರಸದೌತಣ ಡಬಲ್​ ಇರಲಿದೆ. ಉಪ್ಪಿ, ಶಿವರಾಜ್​ಕುಮಾರ್​​​​, ರಾಜ್​ ಬಿ ಶೆಟ್ಟಿ ಉಪಸ್ಥಿತಿಯಲ್ಲಿ ಸಿನಿಮಾ ಸಖತ್​ ಕ್ಯೂರಿಯಾಸಿಟಿ ಮೂಡಿಸಿದೆ.

  • ಓಂ, ಪ್ರೀತ್ಸೆ ಚಿತ್ರದ ನಂತ್ರ ಮೋಡಿ ಮಾಡಲಿದೆ ಹಿಟ್​​​​ ಕಾಂಬೋ
  • ಸ್ಟಾರ್​ ನಟರೊಂದಿಗೆ ಸೊಂಟ ಬಳುಕಿಸೋ ನಟಿಯರು..?

ಸಂಗೀತ ಲೋಕದಲ್ಲಿ ಸದ್ದು ಮಾಡ್ತಿರೋ ಮ್ಯೂಸಿಕ್​ ಮಾಂತ್ರಿಕ ಅರ್ಜುನ್​ ಜನ್ಯಾ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಿರ್ಮಾಪಕ ರಮೇಶ್​ ರೆಡ್ಡಿ ಕಥೆ ಕೇಳಿದ ತಕ್ಷಣ ಯೆಸ್​ ಅಂದಿದ್ದಾರೆ. ಇನ್ನೂ ಹ್ಯಾಟ್ರಿಕ್​ ಹೀರೋ ಶಿವಣ್ಣ ಕೂಡ ಚಿತ್ರಕಥೆಗೆ ಕ್ಲೀನ್​​ ಬೋಲ್ಡ್​ ಆಗಿದ್ದಾರೆ. ಓಂ, ಪ್ರೀತ್ಸೆ, ಲವಕುಶ ಸಿನಿಮಾಗಳಲ್ಲಿ ಒಂದಾಗಿದ್ದ ಹಿಟ್​​ ಜೋಡಿ ಮತ್ತೆ ತೆರೆಯ ಮೇಲೆ ಮ್ಯಾಜಿಕ್​ ಮಾಡೋಕೆ ಬರ್ತಿದ್ದಾರೆ.

ಚಿತ್ರದಲ್ಲಿ ಮತ್ತೊಬ್ಬ ಯಶಸ್ವಿ ನಿರ್ದೇಶಕ ರಾಜ್​​ ಬಿ ಶೆಟ್ಟಿ ಆ್ಯಕ್ಟ್​ ಮಾಡಲಿದ್ದು ಚಿತ್ರದ ತೂಕ ಹೆಚ್ಚಾಗಿದೆ. ಶಿವಣ್ಣ, ಉಪೇಂದ್ರ ಜೊತೆಗೆ ಆ್ಯಕ್ಟ್​ ಮಾಡೋಕೆ ರಾಜ್​ ಬಿ ಶೆಟ್ಟಿ ಕೂಡ ಎಗ್ಸೈಟ್​ ಆಗಿದ್ದಾರೆ. ಮಾಸ್​ ಏಂಟರ್​​ಟೈನರ್​​​​​ ಸಿನಿಮಾದಲ್ಲಿ ತ್ರಿಮೂರ್ತಿಗಳು ಯಾವ ರೋಲ್​ನಲ್ಲಿ ಅಬ್ಬರಿಸ್ತಾರೋ ಅನ್ನೋ ಕುತೂಹಲ ಚಿತ್ರಪ್ರೇಮಿಗಳಲ್ಲಿ ಮನೆ ಮಾಡಿದೆ.

45 ಚಿತ್ರಕ್ಕೆ ಅರ್ಜುನ್​​ ಜನ್ಯಾ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು ಪ್ರೀ ಪ್ರೊಡಕ್ಷನ್​ ಹಂತದಲ್ಲಿದೆ. ಒಟ್ಟಾರೆ ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡಿರೋ ಸಿನಿಮಾದ ಮತ್ತಷ್ಟು ಅಪ್ಡೇಟ್ಸ್​​ಗಾಗಿ ಸಿನಿರಸಿಕರು ಕಾಯ್ತಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES