ಮುಂಬೈ: ಕತ್ತಲೆಯ ಮೇಲೆ ಬೆಳಕು, ಕೆಡುಕಿನ ಮೇಲೆ ಒಳಿತಿನ ಮತ್ತು ಅಜ್ಞಾನದ ಮೇಲೆ ಜ್ಞಾನದ ಆಧ್ಯಾತ್ಮಿಕ ವಿಜಯವನ್ನು ಸಂಕೇತಿಸುವ ಹಿಂದೂ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಅತ್ಯಂತ ಅದ್ಧೂರಿಯಾಗಿ ಹಾಗೂ ಭಕ್ತಿಯಿಂದ ಆಚರಿಸಲಾಯಿತು.
ಅನೇಕ ನಟ-ನಟಿಯರು, ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಅದರಂತೆ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ದೀಪಾವಳಿ ಶುಭಾಶಯ ಕೋರಿದ್ದರು.
ಅ.24 ರಂದು ಜಹೀರ್ ಖಾನ್ ಅವರು ತಮ್ಮ ಪತ್ನಿ, ನಟಿ ಸಾಗರಿಕಾ ಘಾಟ್ಗೆ ಜತೆ ತಮ್ಮ ಹಣೆಯ ಮೇಲೆ ಕೆಂಪು ತಿಲಕ ಇರುವ ಫೋಟೋವನ್ನ ಪೋಸ್ಟ್ ಮಾಡಿ ದೀಪಾವಳಿಗೆ ಶುಭಾಶಯ ಕೋರಿದ್ದರು. ಇದಕ್ಕೆ ಕೆಲವು ಇಸ್ಲಾಮಿಕ್ ಹಾಗೂ ಮುಸ್ಲಿಂ ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿ ಇವರು ಇಸ್ಲಾಮಿಕ್ ವಿರೋಧಿಗಳು ಎಂದು ಟ್ವೀಟರ್ನಲ್ಲಿ ಕಿಡಿಕಾರುತ್ತಿದ್ದಾರೆ.
ಇನ್ನು ಕೆಲವರಾದ ಹನಿ ಮಿರ್ಜಾ ಎಂಬುವರು ಟ್ವಿಟರ್ನಲ್ಲಿ ಒಬ್ಬರು ಭಾರತವನ್ನು ಮುಸ್ಲಿಂ ವಿರೋಧಿ ದೇಶ ಎಂದು ಕರೆದರು. ಈಗ ಈ ದಂಪತಿಗಳನ್ನು ಆಶೀರ್ವದಿಸಿದರು. ದುರದೃಷ್ಟವಶಾತ್ ನೀವು ಬದುಕಬೇಕಾದ ಮುಸ್ಲಿಂ ವಿರೋಧಿ ರಾಷ್ಟ್ರವಾದ ಭಾರತದಲ್ಲಿ ಈ ಚಿತ್ರವನ್ನು ಏಕೆ ಪೋಸ್ಟ್ ಮಾಡಿದ್ದೀರಿ ಎಂದು ನನಗೆ ಅರ್ಥವಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಹರೂನ್ ವಾನಿ ಎಂಬ ಇನ್ನೊಬ್ಬರು, ಮುಸ್ಲಿಮರು ಪ್ರತಿಯೊಂದು ಧರ್ಮದ ಬಗ್ಗೆ ಪ್ರೀತಿ ಮತ್ತು ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ಶೂನ್ಯ ಶೇಕಡಾ ದ್ವೇಷವನ್ನು ಹೊಂದಿದ್ದರೂ, ಅವರು ಇತರ ಧರ್ಮಗಳು ಆಚರಿಸುವ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.