Wednesday, January 22, 2025

ಇಂಗ್ಲೆಂಡ್​ಗೆ ಭಾರೀ ಮುಖಭಂಗ; ಐರ್ಲೆಂಡ್​ಗೆ ಗೆಲುವು

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-ವಿಶ್ವಕಪ್​ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಇಂಗ್ಲೆಂಡ್​ಗೆ​ ಭಾರೀ ಮುಖಭಂಗವಾಗಿದೆ.

ಇಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐರ್ಲೆಂಡ್​ ಹಾಗೂ ಇಂಗ್ಲೆಂಡ್​ ನಡುವಿನ ಟಿ-20 ಪಂದ್ಯದಲ್ಲಿ ಮಳೆ ಅಡ್ಡಿಯಾಗಿರುವುದರಿಂದ ಡಿಎಲ್​ಎಸ್​ ಪ್ರಕಾರ ಐರ್ಲೆಂಡ್​ ತಂಡ ಗೆಲುವು ಸಾಧಿಸಿದತು.

ಮೊದಲು ಬ್ಯಾಟಿಂಗ್​ ಮಾಡಿದ ಐರ್ಲೆಂಡ್ ತಂಡ 19.2 ಓವರ್​ಗಳಲ್ಲಿ 157 ರನ್​ ಕಳೆಹಾಕಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು. ಐರ್ಲೆಂಡ್​ ಪರ ನಾಯಕ ಬಾಲ್ಬಿರ್ನಿ 62 ರನ್​ಗಳಿಸಿ ತಂಡಕ್ಕೆ ನೆರವಾದರು.

ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 14.3 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 105 ರನ್​ ಕಲೆಹಾಕುವಷ್ಟರಲ್ಲಿ ಮಳೆ ಅಡ್ಡಿ ಆಯಿತು. ಮಳೆ ನಿಲ್ಲದ ಕಾರಣಕ್ಕೆ ಡಕ್ವರ್ಥ್​ ಲೂಯಿಸ್​(ಡಿಎಲ್​ಎಸ್​) ಪ್ರಕಾರ ಐರ್ಲೆಂಡ್ ತಂಡ​ ಇಂಗ್ಲೆಂಡ್​ ವಿರುದ್ಧ 5 ರನ್​ ಗಳ ಜಯ ಸಾಧಿಸಿತು.

RELATED ARTICLES

Related Articles

TRENDING ARTICLES