Saturday, January 18, 2025

ವೀರಗಾಸೆ ಕಲಾವಿದರಲ್ಲಿ ಕ್ಷಮೆ ಕೇಳಿದ ಡಾಲಿ ಧನಂಜಯ್​​

ಬೆಂಗಳೂರು: ಹೆಡ್​-ಬುಷ್​​ ಚಿತ್ರದಲ್ಲಿ ವೀರಗಾಸೆಯನ್ನ ಕೆಟ್ಟದಾಗಿ ಚಿತ್ರದಲ್ಲಿ ತೋರಿಸಿಲ್ಲ ಎಂದು ನಟ ಧನಂಜಯ್​ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಹೆಡ್​-ಬುಷ್​ ಚಿತ್ರದಲ್ಲಿ ವೀರಗಾಸೆಯವರು ಲಿಂಗ ಧರಿಸಿ ಬರ್ತಾರೆ. ಶೂ ಧರಿಸಿ ಬಂದವ್ರಿಗೆ ಡಾಲಿ ಹೊಡೆದಿದ್ದಾರೆ. ವೀರಗಾಸೆ ನಡೆಯೋ ಸಮಯದಲ್ಲಿ ಅಟ್ಯಾಕ್ ಮಾಡೋ ದೃಶ್ಯ. ಅಟ್ಯಾಕ್ ಮಾಡೋ ವೀರಗಾಸೆಯವರಿಗೆ ಹೊಡೆಯೋ ದೃಶ್ಯ ವೈರಲ್​ ಆಗಿ ಚಿತ್ರ ತಂಡದ ವಿರುದ್ಧ ದೂರು ನೀಡಲಾಗಿತ್ತು.

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧನಂಜಯ್​, ಎಲ್ಲ ಊರಲ್ಲೂ ವೀರಭದ್ರೇಶ್ವರ ದೇವಾಸ್ಥಾ‌ನ ಇದೆ. ನಮಗೆ ತಪ್ಲು ಕಂಡಿಲ್ಲ. ಈ ಸೀನ್​ನಿಂದ ಬೇಜಾರಾಗಿದ್ರೆ ಕ್ಷಮೆ ಕೇಳ್ತಿನಿ. ಕೆಲವರು ವೀರಗಾಸೆ ಬಗ್ಗೆ ಮತನಾಡುತ್ತಿದ್ದಾರೆ. ವೀರಗಾಸೆ ಕಲಾವಿದರ ಕಷ್ಟ ಇವರಿಗೆ ಗೊತ್ತಾ ಎಂದರು.

ಇನ್ನು ನಮ್ಮ ಸಮಾಜ ಅವಮಾನ ಮಾಡುವಂತದ್ದು ಈ ಚಿತ್ರದಲ್ಲಿ ಏನು ಮಾಡಿಲ್ಲ. ವಿವಾದ ಬೆಳೆಸೋದು ಬೇಡ ಇಲ್ಲಿಗೆ ಮುಗಿಸೋಣ. ವೀರಗಾಸೆ ಅವರಿಗೆ ನೋವಾಗಿದ್ದಾರೆ ಕ್ಷಮೆ ಕೇಳುತ್ತೇನೆ ಎಂದು ಡಾಲಿ ಹೇಳಿದರು.

RELATED ARTICLES

Related Articles

TRENDING ARTICLES