Wednesday, January 22, 2025

ಹಾಸನಾಂಬೆಯ ದೇವಾಲಯ ಬಳಿ ಗಿಳಿ ಶಾಸ್ತ್ರ ಕೇಳಿದ ಸಿ.ಟಿ ರವಿ

ಹಾಸನ: ಹಾಸನಾಂಬೆಯ ದೇವಸ್ಥಾನ ಬಳಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಗಿಳಿ ಶಾಸ್ತ್ರ ಕೇಳಿದ್ದಾರೆ.

ಇಂದು ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದ ಸಿ.ಟಿ.‌ರವಿ ಅವರು, ಹಾಸನಾಂಬೆಯ ದರ್ಶನ ಮುಗಿಸಿ ವಾಪಸ್ಸು ಹೋಗುವಾಗ ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಕಾರಿನಿಂದ ಇಳಿದು ಬಂದು ಗಿಳಿ ಶಾಸ್ತ್ರ ಕೇಳಿದ್ದಾರೆ.

ಮೊದಲಿಗೆ ಶಾಸ್ತ್ರ ಹೇಳುವವನ ಹೆಸರು, ಊರು, ಎಷ್ಟು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿದ್ದೀರಾ ಎಂದು ಸಿಟಿ ರವಿ ಅವರು ವಿಚಾರಿಸಿದ್ದಾರೆ. ನಂತರ ಶಾಸ್ತ್ರ ಹೇಳಿದ ಗಿಳಿ ಆಡಿಸುವವ, ನಿಮ್ಮ ಕೈ ರೇಖೆ ಚೆನ್ನಾಗಿದೆ. ಎಲ್ಲೇ ಹೋದರೂ ಅನ್ನ ಸಿಗುತ್ತದೆ. ಬಟ್ಟೆ ಅನ್ನಕ್ಕೆ ನಿಮಗೆ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರ ಹೇಳಿದ್ದಾನೆ.

ಇನ್ನು ನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ, ದಾನಧರ್ಮ ಮಾಡೋದ್ರಲ್ಲಿ ಉದಾರತೆ ಬೇಡ. ತಿಥಿ ಊಟ ಮಾಡೋದಕ್ಕೆ ಹೋಗಬೇಡಿ, ಎಂದು ಹೀಗೆ ಶಾಸ್ತ್ರ ನೋಡಿ ಸಾಲು ಸಾಲು ವಿಚಾರಗಳನ್ನ ಗಿಳಿ ಆಡಿಸುವ ವ್ಯಕ್ತಿ ಹೇಳಿದ್ದಾನೆ.

RELATED ARTICLES

Related Articles

TRENDING ARTICLES