Monday, December 23, 2024

ವಿಷದ ಗಾಳಿಗೆ ತುತ್ತಾಗುತ್ತಿದ್ಯಾ ರಾಜಧಾನಿ ಬೆಂಗಳೂರು..?

ಬೆಂಗಳೂರು : ರಾಜಧಾನಿಯಲ್ಲಿ ಪಟಾಕಿಯಿಂದ ರಕ್ಕಸ ಹೊಗೆಯ ಅಬ್ಬರ ಹೆಚ್ಚಾಗಿದ್ದು, ಮೂರೇ ದಿನಕ್ಕೆ ಬೆಂಗಳೂರಿನಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ.

ನಗರದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ವಿಷವಾಗುತ್ತಾ ಬೆಂಗಳೂರು ಗಾಳಿ..? ಮೂರೇ ದಿನಕ್ಕೆ ಬೆಂಗಳೂರಿನಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಸ್ಕಿಲ್ ಬೋರ್ಡ್,ಸಿಟಿ ರೈಲ್ವೆ ನಿಲ್ದಾಣ ಜಯನಗರ ಸುತ್ತ ಮುತ್ತ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚು ದಾಖಲಾಗಿದೆ.

ಪಟಾಕಿ ನಿಷೇಧ ಹೇರಿದ್ದರು ಅನೇಕ ಕಡೆಗಳಲ್ಲಿ ಹಸಿರು ಪಟಾಕಿ ಜೊತೆ ಎಲ್ಲಾ ಪಟಾಕಿ ಸ್ಪೋಟಗೊಂಡಿದ್ದು, ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಅವಕಾಶ ನೀಡಿದ್ರೂ ಅವಧಿ ಮೀರಿ ಪಟಾಕಿ ಸಿಡಿಸಿದ್ದರಿಂದ ಮೂರು ದಿನಗಳಲ್ಲಿ ನಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ. ನಗರದ ಚನ್ನಸಂದ್ರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಾಗಿದ್ದು, (AQI) 42, ಕಾಕ್ಸಟೌನ್ AQI 70, ಸಿ.ವಿ.ರಾಮನ್ ನಗರ 53, ಈಜಿಪುರ 66, ಹೆಬ್ಬಾಳ 95, ಕೆ.ಆರ್‌.ಪುರಂ 21 ಮಾರುತಿನಗರ 74, ಪೀಣ್ಯ 93, ಪ್ರೆಸ್ಟೀಜ್ ಪಾರ್ಕ್ ವ್ಯೂವ್ ಬಳಿ AQI ಮಟ್ಟ 42 ದಾಖಲಾಗಿದೆ.

RELATED ARTICLES

Related Articles

TRENDING ARTICLES