ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸೆಡ್ಡು ಹೊಡೆದು ಅಧಿಕಾರ ಹಿಡಿಯೋದಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ಅಖಾಡಕ್ಕೆ ಇಳಿದಿದ್ದಾರೆ. ಮೊದಲ ಪ್ರಯತ್ನದಲ್ಲೇ ಪಕ್ಷದಲ್ಲಿದ್ದ ಅಸಮಧಾನಕ್ಕೆ ಫುಲ್ ಸ್ಟಾಪ್ ಹಾಕೋದಕ್ಕೆ ಯಶಸ್ವಿಯಾಗಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಜಿ.ಟಿ.ದೇವೇಗೌಡರನ್ನು ಮನವೊಲಿಸಿದ್ದು. ಆದ್ರೆ, ಈ ಸಂಧಾನದ ನಂತರ ಪಕ್ಷದಲ್ಲೇ ಮತ್ತೆ ಅಸಮಾಧಾನ ಹೆಚ್ಚಾಗ್ತಿದೆ ಎಂಬ ಮಾತು ಕೇಳಿ ಬರ್ತಿದೆ.
ಜಿ.ಟಿ. ದೇವೇಗೌಡರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ನಿಂದಲೇ ಮತ್ತೇ ಸ್ಪರ್ಧೆ ಮಾಡ್ತೀನಿ ಅಂತ ಘೋಷಣೆ ಮಾಡಿರೋದು ಅವರ ಆಪ್ತರಲ್ಲಿ ಅಸಮಧಾನದ ಹೆಚ್ಚಾಗಿದೆ ಎಂದು ಹೇಳಲಾಗ್ತಿದೆ. ಮೈತ್ರಿ ಸರ್ಕಾರದ ನಂತ್ರ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಪಾಡಿಕೊಂಡಿದ್ರು ಜಿ.ಟಿ.ದೇವೇಗೌಡ್ರು. ಜೊತೆಗೆ, ಜಿಟಿಡಿ ಜೊತೆ ಪಕ್ಷ ಬಿಡಲು ನಿರ್ಧರಿಸಿದ್ದ ಶಿವಲಿಂಗೇಗೌಡ, ಎಟಿ ರಾಮಸ್ವಾಮಿ, ಮಾಜಿ ಶಾಸಕ ವೈಎಸ್‌ವಿ ದತ್ತ ಸೇರಿದಂತೆ ಕೆಲ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ ಎಂದು ಹೇಳಲಾಗ್ತಿದೆ.
ಜಿಟಿಡಿ ನಿರ್ಧಾರದಿಂದ ಸ್ಥಳೀಯ ನಾಯಕರು ಕೂಡ ಆಕ್ರೋಶ ವ್ಯಕ್ತವಾಗ್ತಿದೆ. ಸದ್ಯ ಜಿಟಿ ದೇವೇಗೌಡ ಪುತ್ರನಿಗೂ ಹುಣುಸೂರಿನಿಂದ ವಿಧಾನಸಭೆ ಚುನಾವಣೆಗೆ ಈ ಬಾರಿ ಟಿಕೆಟ್ ಸಿಗೋದು ಕನ್ಫರ್ಮ್ ಅಂತ ಹೇಳಲಾಗ್ತಿದೆ. ಜಿಟಿಡಿ ಅವಕಾಶದ ರಾಜಕೀಯ ಮಾಡ್ತಿದ್ದಾರೆ ಅಂತ ಅವರ ಆಪ್ತರಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ ಎಂದು ಹೇಳಲಾಗ್ತಿದೆ. ಜೆಡಿಎಸ್‌ನಿಂದ ಜಿಟಿಡಿ ಜೊತೆ ಅಂತರ ಕಾಪಾಡಿಕೊಳ್ತಿದ್ದ ಅವರ ಆಪ್ತರು, ಕಾರ್ಯಕರ್ತರು ನಮ್ಮ ಪಾಡೇನು ಅಂತಾ ಜಿಟಿಡಿ ವಿರುದ್ಧ ಅಸಮಧಾನ ಹೊರಹಾಕಿದ್ದಾರಂತೆ.
ಒಟ್ನಲ್ಲಿ ಮುಂಬರುವ ಚುನಾವಣೆಯಲ್ಲಿ ಗೆದ್ದು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ಎಂಟ್ರಿ ಆಗಿರೋದು ಸಂಚಲನ ಮೂಡಿಸಿದೆ. ಇನ್ನು ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳೋದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ದಾಳವನ್ನು ಉರುಳಿಸಿದ್ದಾರೆ. ಜಿಟಿ ದೇವೇಗೌಡರು ಪಕ್ಷ ಬಿಟ್ಟರೆ ಹಳೇ ಮೈಸೂರು ಭಾಗವನ್ನ ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಬಹುದೆಂದು ಪ್ಲಾನ್ ಮಾಡಿದ್ದ ಬಿಜೆಪಿ, ಕಾಂಗ್ರೆಸ್ ನಾಯಕರ ಪ್ಲ್ಯಾನ್ ಉಲ್ಟಾ ಮಾಡಿದೆ ಜೆಡಿಎಸ್.. ಜೆಡಿಎಸ್‌ನಲ್ಲಿ ಅಸಮಧಾನ ಹೊಂದಿರುವ ಶಾಸಕರನ್ನ ಮತ್ತೆ ಪಕ್ಷಕ್ಕೆ ಕರೆತರ್ತಾರಾ..? ಜಿಟಿ ದೇವೇಗೌಡರ ನಿರ್ಧಾರ ಮುಂಬರುವ ಚುನಾವಣೆಯಲ್ಲಿ ಹೇಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ
ರೂಪೇಶ್ ಬೈಂದೂರು ಪವರ್ ಟಿವಿ ಬೆಂಗಳೂರು