Saturday, May 11, 2024

ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಚಿಲ್ಲಾಪಿಲ್ಲಿಯಾದ ಮೀನುಗಳ ರಾಶಿ

ಉಡುಪಿ; ಮೀನಿನ ಲಾರಿಯೊಂದು ರಸ್ತೆಯಲ್ಲಿ ಮಗುಚಿ ಬಿದ್ದ ಕಾರಣ ರಸ್ತೆಯಲ್ಲೆಲ್ಲ ಮೀನುಗಳು ರಾಶಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಉಚ್ಚಿಲ ಬಳಿ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಮೀನುಗಳನ್ನು ತುಂಬಿದ್ದ ಲಾರಿ ಉಚ್ಚಿಲ ಮೂಳೂರಿನಲ್ಲಿ ಪಲ್ಟಿಯಾಗಿದೆ. ರಸ್ತೆ ಕಾಮಗಾರಿ ಸಲುವಾಗಿ ಡೈವರ್ಶನ್ ಇದ್ದುದನ್ನು ಗಮನಿಸದೆ ಚಾಲಕ ವೇಗವಾಗಿ ಬಂದು ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಲಾರಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

ಲಾರಿಯಲ್ಲಿದ್ದ ಮೀನುಗಳು ಟ್ರೇ ಸಹಿತ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

RELATED ARTICLES

Related Articles

TRENDING ARTICLES