Monday, December 23, 2024

ಸ್ವಾಮೀಜಿ ಆತ್ಮಹತ್ಯೆಯ ಸುತ್ತ ನೂರಾರು ಅನುಮಾನಗಳು; ಸ್ವಾಮೀಜಿನ ಖೆಡ್ಡಾಗೆ ಕೆಡವಿದ್ರಾ ಆ ಲೇಡಿ.?

ರಾಮನಗರ: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಸುತ್ತ ನೂರಾರು ಅನುಮಾನಗಳು ಹುಟ್ಟಿಕ್ಕೊಂಡಿದೆ.

ಬಸವಲಿಂಗ ಶ್ರೀಗಳನ್ನು ಮಠದ ಗದ್ದುಗೆಯಿಂದ ಇಳಿಸಲು ನಡೆದಿತ್ತಾ ಮಾಸ್ಟರ್ ಪ್ಲಾನ್ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಸ್ವಾಮಿಜಿ ರವರ ಡೆತ್ ನೋಟ್ ನ ಬಗ್ಗೆ ಸಾಕಷ್ಟು ಅನುಮಾನಗಳು ಮನೆ ಮಾಡಿದೆ. ಹಾಗೂ ಓರ್ವ ಮಠಾಧೀಶ, ಮಹಿಳೆಯನ್ನು ಮುಂದಿಟ್ಟುಕೊಂಡು ಶ್ರೀಗಳ ಬಗ್ಗೆ ಅಪಪ್ರಚಾರಕ್ಕೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.

ಸ್ವಾಮೀಜಿಯ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ಲಾ ಆ ಲೇಡಿ? ಎಂದು ಕೆಲವು ಮೂಲಗಳು ಹೇಳುತ್ತಿದ್ದು, ಸ್ವಾಮೀಜಿಯ ಬಗ್ಗೆ ಚಾರಿತ್ರ್ಯ ವಧೆ ಮಾಡಲು ಸಂಚು ರೂಪಿಸಿದ್ರಾ ಇನ್ನೋರ್ವ ಸ್ವಾಮೀಜಿ ಎಂಬ ಪ್ರಶ್ನೆ ಎದುರಾಗಿದೆ.

ಇನ್ನು ವಾಟ್ಸ್ ಆಪ್ ವಿಡಿಯೋ ಕಾಲ್ ಮುಖಾಂತರ ಆ ಲೇಡಿಯ ಜೊತೆ ಸ್ವಾಮೀಜಿ ಮಾತಾನಾಡಿದ್ರಂತೆ, ಸ್ವಾಮಿಜಿಗೆ ಸಂಭಂದಪಟ್ಟ ವಿಡಿಯೋ ಆ ಮಹಿಳೆಯ ಬಳಿ ಇತ್ತಾ? ಅಸಲಿಯಾಗಿ ಆ ವಿಡಿಯೋ ದಲ್ಲಿ ಇರೋದಾದ್ರು ಏನು? ಪದೇ ಪದೇ ಆ ಲೇಡಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತಾಡಿದ್ರ ಸ್ವಾಮೀಜಿ ಎಂಬ ನೂರಾರು ಪ್ರಶ್ನೆಗಳು ಸ್ವಾಮಿಜಿಯ ಸಾವಿನ ಸುತ್ತ ಹುಟ್ಟುಕ್ಕೊಂಡಿದೆ.

ಆ ಅನಾಮದೇಯ ಮಹಿಳೆ ಮೇಲೆ ಸೆಕ್ಷನ್ 306 ಹಾಕಲು ಪೋಲಿಸರು ಮುಂದಾಗಿದ್ದಾರೆ ಹಾಗೂ ಮತ್ತೋರ್ವ ಸ್ವಾಮೀಜಿಯ ಬೆನ್ನು ಬಿದಿದ್ದಾರೆ ಪೋಲಿಸರು. 25 ವರ್ಷಗಳಿಂದ ಯಶಸ್ವಿಯಾಗಿ ಬಂಡೇಮಠವನ್ನು ನಡೆಸಿಕೊಂಡು ಬಂದಿದ್ದ ಬಸವಲಿಂಗ ಸ್ವಾಮೀಜಿ ಇದೀಗ ಆತ್ಮಹತ್ಯೆ ಮಾಡಿಕ್ಕೊಂಡಿರುವುದು ಅನುಮಾನ ಹುಟ್ಟುಕ್ಕೊಂಡಿದೆ.

RELATED ARTICLES

Related Articles

TRENDING ARTICLES