Monday, December 23, 2024

27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯಗ್ರಹಣ..!

ದೀಪಾವಳಿ ಹೊತ್ತಲ್ಲೇ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಈ ವರ್ಷದ ಕೊನೆಯ ಸೂರ್ಯ ಗ್ರಹಣ ಅಕ್ಟೋಬರ್​ 25ರಂದು ಸಂಭವಿಸಲಿದ್ದು, ಇಡೀ ಜಗತ್ತೇ ಅತ್ಯಂತ ಕುತೂಹಲದಿಂದ ಕೌತುಕವನ್ನ ಕಣ್ತುಂಬಿಕೊಳ್ಳಲು ಎದುರು ನೋಡ್ತಿದೆ. ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸೂರ್ಯಗ್ರಹಣ ಉತ್ತಮ ರೀತಿಯಲ್ಲಿ ಗೋಚರಿಸುತ್ತದೆ ಅಂತ ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಪೂರ್ವ ಭಾಗಗಳಲ್ಲಿ ಸೂರ್ಯಾಸ್ತದ ವೇಳೆ ಗ್ರಹಣ ಸಂಭವಿಸಲಿದೆ.. ಈಶಾನ್ಯ ಭಾಗಗಳಲ್ಲಿ ಸೂರ್ಯಾಸ್ತದ ಬಳಿಕ ಗ್ರಹಣ ಸಂಭವಿಸುವ ಕಾರಣ ಈ ಭಾಗಗಳಲ್ಲಿ ಗ್ರಹಣ ಕಾಣಿಸದು ಎಂದು ಅವರು ವಿಜ್ಞಾನಿಗಳು ಹೇಳಿದ್ದಾರೆ.

ಸೂರ್ಯ ಗ್ರಹಣ ಈ ಹಿಂದೆ 2019ರಲ್ಲಿ ಗೋಚರವಾಗಿತ್ತು.. ಇದೀಗ ಮತ್ತೆ ದೀಪಾವಳಿಯ ಅಮಾವಾಸ್ಯೆಗೆ ಸಂಭವಿಸುತ್ತಿದ್ದು, ಗ್ರಹಣದ ಗರಿಷ್ಠ ಗೋಚರತೆ ವೇಳೆ, ಅಸ್ತಂಗತವಾಗುತ್ತಿರುವ ಸೂರ್ಯನ ಬಿಂಬದ ಶೇ. 4ರಷ್ಟು ಭಾಗವನ್ನು ಚಂದ್ರಬಿಂಬ ಮುಚ್ಚಲಿದ್ಯಂತೆ.. ಭಾರತವಲ್ಲದೇ ಯುರೋಪ್‌, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಹ ಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲೂ ಸಹ ಸಂಜೆ 5.12ಕ್ಕೆ ಗ್ರಹಣ ಆರಂಭವಾಗಿ, 5.49ಕ್ಕೆ ಗರಿಷ್ಠ ಮಟ್ಟವನ್ನು ತಲುಪಲಿದೆ ಹಾಗೂ 5.55ರ ವೇಳೆಗೆ ಮುಕ್ತಾಯವಾಗಲಿದೆ. ಗ್ರಹಣದ ವೇಳೆ ಸೂರ್ಯಕಿರಣಗಳು ಕಣ್ಣುಗಳಿಗೆ ಅಪಾಯಕಾರಿ ಆಗಿರುವ ಕಾರಣ ಗ್ರಹಣ ನೋಡಲು ಇಚ್ಛಿಸುವವರು ಅತ್ಯಂತ ಹೆಚ್ಚು ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು. ಬರಿಗಣ್ಣಿನಿಂದ ನೋಡಲು ಅಪಾಯಕಾರಿ ಹೀಗಾಗಿ ಸೋಲಾರ್ ಕನ್ನಡಕ ಬಳಸಿ ವೀಕ್ಷಿಸಬಹುದಾಗಿದೆ‌. ನಗರದಲ್ಲಿ ಆಕಾಶದೆತ್ತರದ ಕಟ್ಟಡಗಳಿರುವ ಕಾರಣ ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣದ ಕಷ್ಟಸಾಧ್ಯ.

ಸೂರ್ಯ ಗ್ರಹಣ ಹಿನ್ನೆಲೆ ಬೆಂಗಳೂರಿನ ಹಲವು ದೇವಾಲಗಳು ಮುಂಜಾನೆ ಪೂಜೆ ಬಳಿಕ ಬಂದ್ ಆಗಲಿವೆ.. ದೀಪಾವಳಿಯ ದಿನ ಗೋಚರವಾಗುತ್ತಿರುವ ಗ್ರಹಣ ವೈಶಿಷ್ಟ್ಯವಾಗಿರುತ್ತೆ. ಇದು ಈ ವರ್ಷದ ಕಡೆಯ ಗ್ರಹಣ.. ಅರ್ಧ ಕಷ್ಟ, ಅರ್ಧದಷ್ಟು ಸುಖ ಇರಲಿದೆ.. ಹಬ್ಬದ ದಿನ ಸೂರ್ಯಗ್ರಹಣ ಎಲ್ಲರ ಮನಸ್ಸಿಗೂ ತೊಂದರೆ ಭಾವ ಇದೆ‌.‌. ಹೀಗಾಗಿ ವಿಶೇಷ ಪೂಜೆ ಅಭಿಷೇಕಗಳನ್ನ ಮಾಡಲಾಗುತ್ತಿದೆ.

ಒಟ್ಟಾರೆ, ಸೂರ್ಯಗ್ರಹಣವೇ 2022ರ ಕೊನೆ ಗ್ರಹಣ. ಮತ್ತೆ ಮುಂದಿನ 2 ವರ್ಷ ಯಾವುದೇ ಗ್ರಹಣ ಗೋಚರವಾಗುವುದಿಲ್ಲ. ಹೀಗಾಗಿ ಕೌತುಕವನ್ನ ಕಣ್ತುಂಬಿಕೊಳ್ಳಲು ಜನ ಈಗಲೇ ಕಾತುರದಿಂದ ಕಾಯುತ್ತಿದ್ದಾರೆ.

ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು

RELATED ARTICLES

Related Articles

TRENDING ARTICLES