Sunday, December 22, 2024

ಬ್ರಿಟನ್​ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಧಾಮೂರ್ತಿ ಅಳಿಯ

ಇಂಗ್ಲೆಂಡ್​; ಭಾರತೀಯ ಮೂಲದ ರಿಷಿ ಸುನಕ್​ ಅವರು ಇಂದು ಬ್ರಿಟನ್​ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ಪೋಸಿಸ್​ ನಾರಾಯಣ ಮೂರ್ತಿ, ಸುಧಾಮೂರ್ತಿ ಅಳಿಯ, ಬ್ರಿಟನ್​ ಕನ್ಸರ್ವೇಟಿವ್ ಪಕ್ಷದ 42 ವರ್ಷದ ರಿಷಿ ಸುನಕ್ ಅವರು ಬ್ರಿಟನ್​ ಇತಿಹಾಸದಲ್ಲಿಯೇ ಅತೀ ಕಿರಿಯ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಿಷಿಕ್​ ಪ್ರಮಾಣವಚನವನ್ನ ಬ್ರಿಟನ್​ ರಾಜ ​ಅನುಮೋದಿಸಿದರು.

ಬ್ರಿಟನ್​ನ 10 ಡೌನಿಂಗ್​ ಸ್ಟ್ರೀಟ್​ನಲ್ಲಿ ಮಾತನಾಡಿದ ನೂತನ ಪ್ರಧಾನಿ ರಿಸಿ ಸುನಕ್​​, ಬ್ರಿಟನ್​ ಆರ್ಥಿಕ ಸುಧಾರಣೆಗೆ ನನ್ನ ಸರ್ಕಾರದ ಮೊದಲ ಆದ್ಯತೆ. ಪಕ್ಷ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವುದು ನನ್ನ ಗುರಿ.  ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

2015 ರಲ್ಲಿ ಮೊದಲ ಬಾರಿಗೆ ಸಂಸರಾಗಿ ಸುನಕ್​ ಆಯ್ಕೆಯಾಗಿದ್ದರು. ತದ ನಂತರ 2020 ರಲ್ಲಿ ಬ್ರಿಟನ್​ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಇಂಗ್ಲೆಂಡ್​ನಲ್ಲಾದ ಆರ್ಥಿಕ ಹಿನ್ನಡೆಗೆ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ಕೆಲವೇ ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇದಕ್ಕೂ ಮೊದಲು ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಒಟ್ಟಾರೆಯಾಗಿ 1 ವರ್ಷದಲ್ಲಿ ಒಟ್ಟು ಇಂಗ್ಲೆಂಡ್​(ಬ್ರಿಟನ್​)ಗೆ ಪ್ರಧಾನಿ ಹುದ್ದೆಯಲ್ಲಿ ಇಬ್ಬರು ರಾಜೀನಾಮೆ ನೀಡಿದ್ದು, ಮೂರನೇ ಬಾರಿಗೆ ರಿಷಿ ಸುನಕ್​ ಅವರು ಪ್ರಧಾನಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.

RELATED ARTICLES

Related Articles

TRENDING ARTICLES