Monday, December 23, 2024

ಆದಿಪುರುಷ್ ಠುಸ್ ಆದ್ರೂ, ‘ಸಲಾರ್’ ಸದಾ ಜೀವಂತ

ಆದಿಪುರುಷ್. ಪ್ರಭಾಸ್ ನಟನೆಯ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಆಗಿತ್ತು. ಆದ್ರೆ ಟೀಸರ್ ಹೊರ ಬಂದ ದಿನವೇ, ಇದರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಅನ್ನೋದು ಡಿಸೈಡ್ ಆಯ್ತು. ಆದಿಪುರುಷ್ ಠುಸ್ ಪಟಾಕಿ ಆದ್ರೇನಂತೆ..? ಸಲಾರ್ ಕನಸು ಜೀವಂತವಾಗಿದೆ ಅಂತಿದ್ದಾರೆ ಫ್ಯಾನ್ಸ್. ಅದಕ್ಕೆ ಪೂರಕವಾಗಿ ಒಂದಷ್ಟು ಎಕ್ಸ್​ಕ್ಲೂಸಿವ್ ಸ್ಟಿಲ್ಸ್ ಕೂಡ ರಿವೀಲ್ ಆಗಿವೆ.

  • ಹ್ಯಾಟ್ರಿಕ್ ಸೋಲಿನ ನಂತ್ರ ನೀಲ್ ಕೊಡ್ತಾರೆ ಪಕ್ಕಾ ಹಿಟ್..!

ರೀಸೆಂಟ್ ಆಗಿ ಡಾರ್ಲಿಂಗ್​ ಪ್ರಭಾಸ್ ತಮ್ಮ ಗಾಡ್​ಫಾದರ್ ಕೃಷ್ಣಂರಾಜುರನ್ನ ಕಳೆದುಕೊಂಡ್ರು. ಹಾಗಾಗಿ ಈ ಬಾರಿ ಅವ್ರು ಬರ್ತ್ ಡೇ ಸೆಲೆಬ್ರೇಷನ್​ಗೆ ನೋ ಅಂದಿದ್ದಾರೆ. ಆದ್ರೂ ಸಹ ಆದಿಪುರುಷ್ ಟೀಂ ನ್ಯೂ ಲುಕ್ ಪೋಸ್ಟರ್ ಲಾಂಚ್ ಮಾಡಿ, ರಿಲೀಸ್ ಡೇಟ್​ನ ಸಂಕ್ರಾಂತಿಗೆ ಅನ್ನೋದನ್ನ ಅನೌನ್ಸ್ ಮಾಡಿದೆ.

ಟೀಸರ್ ನೋಡಿ ಈಗಾಗ್ಲೇ ಬೇಸರಗೊಂಡಿರೋ ಪ್ರಭಾಸ್ ಫ್ಯಾನ್ಸ್ ಹಾಗೂ ಸಿನಿರಸಿಕರು, ಆದಿಪುರುಷ್ ಮೇಲೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ. ಸಾಹೋ, ರಾಧೆ ಶ್ಯಾಮ್ ಬಳಿಕ ಆದಿಪುರುಷ್ ಕೂಡ ಪಕ್ಕಾ ಸೋಲಲಿದೆ ಅಂತ ಫಿಕ್ಸ್ ಆಗಿಬಿಟ್ಟಿದ್ದಾರೆ.

ಆದ್ರೆ ಬಾಹುಬಲಿಗೆ ಭರ್ಜರಿ ಕಂಬ್ಯಾಕ್ ಕೊಡೋಕೆ ಮಾನ್​ಸ್ಟರ್ ಪ್ರಶಾಂತ್ ನೀಲ್ ಅವ್ರೇ ಬರಲಿದ್ದಾರೆ ಎನ್ನಲಾಗ್ತಿದೆ. ಯೆಸ್. ಸಲಾರ್ ಸಿನಿಮಾ ಸಂಚಲನ ಮೂಡಿಸೋ ರೇಂಜ್​ಗೆ ಹೊಂಬಾಳೆ ಫಿಲಂಸ್, ಅದನ್ನ ಕಟ್ಟಿಕೊಡ್ತಿದೆ. ಮತ್ತೊಮ್ಮೆ ನೀಲ್ ತಮ್ಮ ಮೇಕಿಂಗ್ ಗಮ್ಮತ್ತು ವಿಶ್ವಕ್ಕೆ ಸಾರಲಿದ್ದಾರೆ. ಇಲ್ಲಿಯವರೆಗೆ ಜಸ್ಟ್ ಸ್ಟಿಲ್ ಫೋಟೋಸ್​ನಿಂದಲೇ ಕಮಾಲ್ ಮಾಡ್ತಿದ್ದ ಸಲಾರ್, ಪ್ರಭಾಸ್ ಬರ್ತ್ ಡೇ ವಿಶೇಷ ಎರಡು ಎಕ್ಸ್​ಕ್ಲೂಸಿವ್ ಸ್ಟಿಲ್ಸ್​ನ ರಿವೀಲ್ ಮಾಡಿದೆ.

ಪ್ರಾಮಿಸಿಂಗ್ ಲುಕ್ಸ್, ಹೈ ವೋಲ್ಟೇಜ್ ಆ್ಯಕ್ಷನ್ ಹಾಗೂ ಜಬರ್ದಸ್ತ್ ಮೇಕಿಂಗ್​ನಿಂದ ಸಲಾರ್ ಸಿನಿಮಾ ಪ್ರಭಾಸ್ ಕರಿಯರ್​ನ ಜೀವಂತವಾಗಿ ಇಡಲಿದೆ. ಸಿನಿಮಾ 2023ರ ಸೆಪ್ಟೆಂಬರ್ 28ಕ್ಕೆ ತೆರೆಗಪ್ಪಳಿಸಲಿದ್ದು, ಕೆಜಿಎಫ್ ರೀತಿ ಬಹುಭಾಷಾ ಕಲಾವಿದರಿಂದ ಜಗಮಗಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES